ಕೋವಿಡ್ ಲಸಿಕೆಯ ಎರಡೂ ಚುಚ್ಚುಮದ್ದುಗಳನ್ನು ಪಡೆದ ಮಂದಿಯಲ್ಲಿ ಮತ್ತೊಮ್ಮೆ ಸೋಂಕು ಕಾಣಿಸಿಕೊಳ್ಳಲು ಡೆಲ್ಟಾ ವೈರಾಣುವೇ ಕಾರಣವೆಂಬ ಮಾತನ್ನು ಇಂಡಿಯನ್ ಸಾರ್ಸ್ ಕೋವ್-2 ಜೀನಾಮಿಕ್ಸ್ ಕನ್ಸಾರ್ಷಿಯಮ್ (ಇನ್ಸಾಕಾಗ್) ಒತ್ತಿ ಹೇಳಿದೆ.
“ಲಸಿಕೆ ಪಡೆದ ಮೇಲೂ ಸೋಂಕು ಬರುವ ಪ್ರಮಾಣ ಹೆಚ್ಚಾಗುತ್ತಿರುವುದು ಕೋವಿಡ್‌ನ ಹೊಸ ಅವತಾರದಿಂದಲೇ ಎಂಬ ಆತಂಕ ನೆಲೆಸಿದೆ. 6.7 ಕೋಟಿ ಜನಸಂಖ್ಯೆಯ ಬ್ರಿಟನ್‌ನಲ್ಲಿ ಏಪ್ರಿಲ್ 2021ರಿಂದ 18 ಲಕ್ಷ ಹೊಸ ಪ್ರಕರಣಗಳು ದಾಖಲಾಗಿದ್ದು, ಇವರ ಪೈಕಿ 12 ಲಕ್ಷ ಮಂದಿ ಲಸಿಕೆ ಪಡೆದವರೇ ಆಗಿದ್ದಾರೆ” ಎಂದು ಇನ್ಸಾಕಾಗ್ ತಿಳಿಸಿದೆ.
ಭಾರತದಲ್ಲೂ ಸಹ ಈ ಅವಧಿಯಲ್ಲಿ ಡೆಲ್ಟಾವತಾರಿ ಕೋವಿಡ್ ಸಾಮಾನ್ಯವಾಗಿದ್ದು, ಲಸಿಕೆ ಪಡೆದ ಮಂದಿಯಲ್ಲೂ ಈ ವೈರಾಣುಗಳು ಸೋಂಕಿಗೆ ಕಾರಣವಾಗುತ್ತಿವೆ ಎಂದು ಈ ವರದಿಯಲ್ಲಿ ತಿಳಿದುಬರುತ್ತದೆ.
ಬೇರೆ ಮಕ್ಕಳ ಜೊತೆ ನಿಮ್ಮ ಮಕ್ಕಳನ್ನು ಎಂದೂ ಹೋಲಿಕೆ ಮಾಡಬೇಡಿ
ಮಾಸಿಕ ಬುಲೆಟಿನ್ ಪ್ರಕಾರ ಜೀನೋಂ ಸೀಕ್ವೆನ್ಸಿಂಗ್ ಮಾಡಲಾದ 72,931 ಸ್ಯಾಂಪಲ್‌ಗಳ ಪೈಕಿ 48,867 ಅನ್ನು ವಿಶ್ಲೇಷಣೆಗೊಳಪಡಿಸಲಾಗಿದೆ. ಇವುಗಳಲ್ಲಿ 60%ನಷ್ಟು ಡೆಲ್ಟಾವತಾರಿ ಕೋವಿಡ್ ವೈರಾಣುವಿನ ಇರುವಿಕೆಯನ್ನು ಖಾತ್ರಿಪಡಿಸಿವೆ.