ಬೆಂಗಳೂರು: ಕಂಪ್ಯೂಟರ್ ಕಲಿಯದ ನೌಕರರಿಗೆ ಬಡ್ತಿ ನೀಡುವುದಿಲ್ಲ. ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಕಲಿಯಲು ಮಾರ್ಚ್ 22ರ ಗಡುವು ನೀಡಲಾಗಿದೆ. ಅಷ್ಟರೊಳಗೆ ಕಂಪ್ಯೂಟರ್ ಕಲಿಯದಿದ್ದರೆ ಬಡ್ತಿ ಇಲ್ಲವೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ನೇರ ನೇಮಕಾತಿಯಾದ ಮತ್ತು ಸೇವಾ ನಿರತರಾದ ಸರ್ಕಾರಿ ನೌಕರರು ಮುಂದಿನ ವರ್ಷದ ಮಾರ್ಚ್ 22 ರ ಒಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸಾಗಿರಬೇಕು. ಇಲ್ಲದಿದ್ದರೆ ಅಂತಹ ನೌಕರರಿಗೆ ಮುಂಬಡ್ತಿ, ವಾರ್ಷಿಕ ಬಡ್ತಿ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ.
ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಅಡಿಯಲ್ಲಿ ನಿರ್ಧಿಷ್ಟ ಹುದ್ದೆಗಳನ್ನು ಹೊರತುಪಡಿಸಿ ಇತರ ಎಲ್ಲಾ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯವಾಗಿ ಪಾಸಾಗಿರಬೇಕು. ಅನೇಕ ಇಲಾಖೆಗಳ ಹೆಚ್ಚಿನ ನೌಕರರು ಕಂಪ್ಯೂಟರ್ ಜ್ಞಾನ ಹೊಂದಿಲ್ಲ. ಹೀಗಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸು ಮಾಡಲು ಕಾಲಮಿತಿ ನೀಡಲಾಗಿದೆ ಎಂದು ಹೇಳಲಾಗಿದೆ.