2021ರ ನವೆಂಬರ್ ತಿಂಗಳು ಮುಗಿಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ವರ್ಷದ ಕೊನೆ ತಿಂಗಳು ಶುರುವಾಗಲಿದೆ. ನವೆಂಬರ್ ಮುಗಿಯುವ ಮೊದಲು ಮಾಡಬೇಕಾದ ಕೆಲವು ಕೆಲಸಗಳಿವೆ. ಸಮಯಕ್ಕೆ ಸರಿಯಾಗಿ ಆ ಕೆಲಸ ಮುಗಿಸದೆ ಹೋದಲ್ಲಿ ಮುಂದೆ ನಷ್ಟ ಎದುರಿಸಬೇಕಾಗುತ್ತದೆ.
ಪಿಂಚಣಿ ಜೀವನ ಪ್ರಮಾಣ ಪತ್ರ: ಪಿಂಚಣಿದಾರರಿಗೆ ಮಹತ್ವದ ಸುದ್ದಿಯಿದೆ. ಪಿಂಚಣಿದಾರರು ನವೆಂಬರ್ 30ರೊಳಗೆ ಮುಖ್ಯವಾದ ಕೆಲಸ ಮಾಡಬೇಕು. ಇಲ್ಲವಾದ್ರೆ ಪಿಂಚಣಿಗೆ ತೊಂದರೆಯಾಗುತ್ತದೆ. ನವೆಂಬರ್ 30ರೊಳಗೆ ಪಿಂಚಣಿದಾರರು, ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಈಗ ಬ್ಯಾಂಕ್ ಶಾಖೆಗೆ ಹೋಗಬೇಕೆಂದೇನಿಲ್ಲ. ಬ್ಯಾಂಕ್ ಗಳು ಆನ್ಲೈನ್ ಹಾಗೂ ವಿಡಿಯೋ ಕರೆ ಮೂಲಕ ಕೂಡ ಈ ವ್ಯವಸ್ಥೆ ಕಲ್ಪಿಸಿವೆ.
ಎಲ್ ಐ ಸಿ ಹೌಸಿಂಗ್ ಫೈನಾನ್ಸ್ ನಲ್ಲಿ ಗೃಹ ಸಾಲಕ್ಕೆ ಅರ್ಜಿ : ಗೃಹ ಸಾಲ ಪಡೆಯಲು ಬಯಸಿದ್ದರೆ ಎಲ್ ಐ ಸಿ ನಿಮಗೆ ಅವಕಾಶ ನೀಡ್ತಿದೆ. ಎಲ್ ಐ ಸಿ ಹೌಸಿಂಗ್ ಫೈನಾನ್ಸ್ ನ ವಿಶೇಷ ಗೃಹ ಸಾಲವು ಈ ತಿಂಗಳು ಮುಕ್ತಾಯಗೊಳ್ಳಲಿದೆ. ಇದ್ರಡಿ ಎಲ್ಐಸಿ ಹೌಸಿಂಗ್ ಫೈನಾನ್ಸ್ 2 ಕೋಟಿ ರೂಪಾಯಿವರೆಗೆ ಗೃಹ ಸಾಲ ನೀಡ್ತಿದೆ. ಶೇಕಡಾ 6.66ರ ಬಡ್ಡಿಯಲ್ಲಿ ಸಾಲ ಸಿಗ್ತಿದೆ.
ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರವೇಶ : ಜವಾಹರ ನವೋದಯ ವಿದ್ಯಾಲಯದ 9ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆ ದಿನ. ಏಪ್ರಿಲ್ 30, 2022 ರಂದು ಆಯ್ಕೆ ಪರೀಕ್ಷೆ ನಡೆಯಲಿದೆ. ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್‌ಸೈಟ್ navodaya.gov.in ನಲ್ಲಿ ನೀವು ಅರ್ಜಿ ಸಲ್ಲಿಸಬಹುದು.