ಬ್ರಿಟನ್ ಸರ್ಕಾರದ ಕಂದಾಯ ಇಲಾಖೆ ಮಾಡಿದ ಎಡವಟ್ಟೊಂದರಿಂದ ಮಹಿಳೆಯೊಬ್ಬರಿಗೆ ಜೀವಮಾನದ ಶಾಕ್ ಆಗಿದೆ.
ಆಗಸ್ಟ್ 2020ರಲ್ಲಿ, ಸ್ವಯಂ ಉದ್ಯೋಗಿಯಾದ ಈ ಮಹಿಳೆಯ ಬ್ಯಾಂಕ್ ಖಾತೆಗೆ ತಪ್ಪಾಗಿ 7,74,839.30 ಪೌಂಡ್‌ಗಳನ್ನು ಬ್ರಿಟನ್‌ನ ಕಂದಾಯ ಹಾಗೂ ಅಬಕಾರಿ ಇಲಾಖೆ (ಎಚ್‌ಎಂಆರ್‌ಸಿ) ವರ್ಗಾವಣೆ ಮಾಡಿತ್ತು.
ಹೀಗೆ ಬಯಸದೇ ಬಂದ ಸೌಭಾಗ್ಯವೊಂದು ಕೆಲವೇ ಕ್ಷಣಗಳಲ್ಲಿ ಭಾರೀ ಆತಂಕಕ್ಕೂ ಕಾರಣವಾಗಿಬಿಟ್ಟಿದೆ. ಇಲಾಖೆಯು ತನ್ನ ತಪ್ಪಿನಿಂದಾದ ದುಡ್ಡನ್ನು ಮರಳಿ ಪಡೆಯಲಿ ಎಂದು ಒಂದು ವರ್ಷಕ್ಕೂ ಹೆಚ್ಚಿನ ಕಾಲ ಈ ಮಹಿಳೆ ಕಾದಿದ್ದಾರೆ. ಆದರೆ ಹಾಗೆ ಆಗಿರಲಿಲ್ಲ.
ಭೋಜನ ವಿರಾಮದೊಳಗೆ ಭಾರತಕ್ಕೆ ವಿಜಯಲಕ್ಷ್ಮಿ ಖಚಿತ: ಕೊಹ್ಲಿ ಪಡೆ ಗೆಲುವಿಗೆ ಐದೇ ಮೆಟ್ಟಿಲು
ತಮ್ಮ ಮನಃಸಾಕ್ಷಿಯನ್ನು ಸ್ಪಷ್ಟವಾಗಿ ಇಟ್ಟುಕೊಂಡ ಈ ಮಹಿಳೆ ಆ ದುಡ್ಡನ್ನು ಇಲಾಖೆಗೆ ಹಿಂದಿರುಗಿಸಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಎಚ್‌ಎಂಆರ್‌ಸಿ ಜೊತೆಗೆ ಗಾರ್ಡಿಯನ್ ಅನ್ನೂ ಮಹಿಳೆ ಸಂಪರ್ಕಿಸಿದ್ದಾರೆ.
ಆದರೆ ಕೋವಿಡ್ ಕಾರಣದಿಂದ ಭಾರೀ ಸಂಕಷ್ಟದ ವರ್ಷ ಕಳೆದು ಬಂದ ಈ ಮಹಿಳೆ, ತನ್ನ ಕಷ್ಟಗಾಲಕ್ಕೆಂದು 20,000 ಪೌಂಡ್‌ಗಳನ್ನು ಬಳಸಿಕೊಂಡುಬಿಟ್ಟಿದ್ದಾರೆ. ಖರ್ಚಾದ ಈ ದುಡ್ಡನ್ನು ಶೀಘ್ರವೇ ಮರಳಿಸಲು ಆಕೆಗೆ ಯಾವುದೇ ದಾರಿ ಕಾಣುತ್ತಿಲ್ಲ.
ಗಾರ್ಡಿಯನ್‌ನಿಂದ ವಿಚಾರ ತಿಳಿದ ಎಚ್‌ಎಂಆರ್‌ಸಿ, ಈ ಸಂಬಂಧ ತನಿಖೆ ನಡೆಸಿ, ತನ್ನ ಸಿಬ್ಬಂದಿಯೊಬ್ಬರು ಆ ಮಹಿಳೆಗೆ ಅಬಕಾರಿ ಸುಂಕದ ವಿನಾಯಿತಿಯಾದ 23.39 ಪೌಂಡ್ ಅನ್ನು ಪಾವತಿ ಮಾಡುವ ಬದಲಿಗೆ ಹೀಗೆ ಮಾಡಿಬಿಟ್ಟಿದೆ ಎಂದಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಎಚ್‌ಎಂಆರ್‌ಸಿ ವಕ್ತಾರ, ಮಹಿಳೆಯ ಸ್ಥಿತಿಗತಿಯನ್ನು ಅರ್ಥ ಮಾಡಿಕೊಂಡು, ಆಕೆಯಿಂದ ಖರ್ಚಾದ ದುಡ್ಡನ್ನು ನಿಧಾನವಾಗಿ ಹಿಂದಕ್ಕೆ ಪಡೆಯಲು ಸೂಕ್ತ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.