
ಮಂಗಳೂರು: ಡ್ರಗ್ಸ್ ದಂಧೆಯಲ್ಲಿ ಸಿಲುಕಿರುವ ಮಗಳನ್ನು ರಕ್ಷಣೆ ಮಾಡುವಂತೆ ಕ್ರೈಸ್ತ ಮಹಿಳೆ ವಿಶ್ವಹಿಂದೂ ಪರಿಷತ್ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಮಹಿಳೆ ತಮ್ಮ ಮಗಳು ಸುರತ್ಕಲ್ ನ ಶರೀಫ್ ಸಿದ್ದಿಕಿ ಬಳಿ ಮೂರು ವರ್ಷದಿಂದ ಡ್ರಕ್ಸ್ ದಂಧೆಯಲ್ಲಿ ಸಿಲುಕಿದ್ದಾಳೆ. ಮಗಳಿಗೆ ನಿತ್ಯವೂ ಡ್ರಗ್ಸ್ ಪೂರೈಕೆ, ಲೈಂಗಿಕ ದೌರ್ಜನ್ಯ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪದವೀಧರೆಯಾಗಿರುವ ತಮ್ಮ ಮಗಳಿಗೆ ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಬೆದರಿಕೆ ಹಾಕಿರುವುದಾಗಿ ಮಹಿಳೆ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ, ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ದೂರು ಕೊಟ್ಟಿದ್ದಾರೆ.
ಪದವಿ ಓದುತ್ತಿರುವ ಪುತ್ರಿಗೆ ಶರೀಫ್ ಸಿದ್ದಿಕಿ ಅಮಲು ಪದಾರ್ಥಗಳನ್ನು ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದರಿಂದ ಮನನೊಂದ ಪತಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ನ್ಯಾಯ ದೊರಕಿಸಿಕೊಡಬೇಕೆಂದು ಮಹಿಳೆ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತ ಶಶಿಕುಮಾರ್ ಭರವಸೆ ನೀಡಿದ್ದಾರೆ.