
ಸೌತ್ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಅವರ ಮುಂಬರುವ ಬಹು ನಿರೀಕ್ಷಿತ ಚಿತ್ರ ‘ಲಿಯೋ’ ದ ಹಾಡೊಂದರಲ್ಲಿ ಧೂಮಪಾನ ಮಾಡಿದ ದೃಶ್ಯದ ಕುರಿತು ಆಕ್ಷೇಪ ವ್ಯಕ್ತಪಡಿಸಿ ದೂರು ದಾಖಲಾಗಿದೆ.
‘ಲಿಯೋ’ ಚಿತ್ರದ ‘ನಾ ರೆಡಿ’ ಎಂಬ ಹಾಡು, ಜೂನ್ 22ರಂದು ಬಿಡುಗಡೆಯಾಗಿದ್ದು, ಇದರಲ್ಲಿ ವಿಜಯ್ ಧೂಮಪಾನ ಮಾಡುತ್ತಿರುವ ದೃಶ್ಯವಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತರೊಬ್ಬರು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ.
ವಿಜಯ್ ಹಾಗೂ ಲಿಯೋ ಚಿತ್ರದ ನಿರ್ಮಾಪಕರ ವಿರುದ್ಧ ದೂರು ದಾಖಲಿಸಲಾಗಿದ್ದು, ಈ ಚಿತ್ರದ ಮೂಲಕ ಮಾದಕ ದ್ರವ್ಯ ಸೇವನೆಗೆ ಉತ್ತೇಜನ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಇವರುಗಳ ವಿರುದ್ಧ ಮಾದಕ ದ್ರವ್ಯ ಸೇವನೆ ನಿಯಂತ್ರಣ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.