ಬೆಂಗಳೂರು : ಜೆಡಿಎಸ್ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂಬ ಆರೋಪದಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಮಂಡ್ಯ ಜಿಲ್ಲಾ ಪಂಚಾಯತ್ ಸ್ಪರ್ಧೆಗೆ ಜೆಡಿಎಸ್ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಡೋನ್ ಪ್ರತಾಪ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ವ್ಯಕ್ತಿ ಯೊಬ್ಬರು ದೂರು ನೀಡಿದ್ದಾರೆ.
ದಾಸರಹಳ್ಳಿ ನಿವಾಸಿ ಚಂದನ್ ಕುಮಾರ್ಗೌಡ ಎಂಬುವರು ದೂರು ನೀಡಿದ್ದು, ಮಂಡ್ಯ ಜಿಲ್ಲಾ ಪಂಚಾಯತ್ ಸ್ಪರ್ಧೆಗೆ ಜೆಡಿಎಸ್ ಟಿಕೆಟ್ ಕೊಡಿಸುವುದಾಗಿ ನಂಬಿಸಿ 2 ಲಕ್ಷ ರು ಪಡೆದು ಪ್ರತಾಪ್ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.