ಚೀನಾದಲ್ಲಿ ಕಾಂಡೋಮ್ ಬಳಕೆಯ ನಂತ್ರವೂ ಮಹಿಳೆ ಗರ್ಭ ಧರಿಸಿದ್ದಾಳೆ. ಕಾಂಡೋಮ್ ಗುಣಮಟ್ಟ ಸರಿಯಿಲ್ಲವೆಂದು ಪತಿ, ಅಧಿಕಾರಿಗಳಿಗೆ ದೂರು ನೀಡಿದ್ದಾನೆ. ಆದ್ರೆ ಅಧಿಕಾರಿಗಳು ಆತನ ಮುಂದೆ ದೊಡ್ಡ ಸವಾಲೊಡ್ಡಿದ್ದಾರೆ. ನಿನಗೆ ಕಾಂಡೋಮ್ ಬಳಸಲು ಬರುತ್ತದೆ ಎಂಬುದನ್ನು ಸಾಭೀತುಪಡಿಸಿದಲ್ಲಿ ಮಾತ್ರ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.
ಝಿಯಾಂಗ್ ಪ್ರಾಂತ್ಯದ ಜಿಯಾಕ್ಸಿಂಗ್‌ನಲ್ಲಿ ವಾಸಿಸುತ್ತಿರುವ ವಾಂಗ್ ಮತ್ತು ಆತನ ಪತ್ನಿಗೆ ಇಬ್ಬರು ಮಕ್ಕಳು. ಜೀವನದಲ್ಲಿ ಸಂತೋಷವಾಗಿದ್ದ ಅವರು ಮೂರನೇ ಮಗು ಬಯಸಿರಲಿಲ್ಲ. ಇದೇ ಕಾರಣಕ್ಕೆ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಕಾಂಡೋಮ್ ಧರಿಸುತ್ತಿದ್ದರು.
ಒಂದು ದಿನ, ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಕಾಂಡೋಮ್ ನಲ್ಲಿ ರಂಧ್ರವಿರುವುದನ್ನು ವಾಂಗ್ ನೋಡಿದ್ದಾನೆ. ಈ ಬಗ್ಗೆ ಪತ್ನಿಗೆ ಹೇಳಿದ್ದಾನೆ. ಪತ್ನಿಗೆ ಗರ್ಭ ನಿರೋಧಕ ಮಾತ್ರೆ ಕೂಡ ನೀಡಿದ್ದಾನೆ. ಆದ್ರೆ ಮಾತ್ರೆ ಯಾವುದೇ ಪರಿಣಾಮ ಬೀರಲಿಲ್ಲ. ಬೆಳಿಗ್ಗೆ ಸುಸ್ತು ಅನುಭವಿಸುತ್ತಿದ್ದ ಮಹಿಳೆ, ಇದೇ ಕಾರಣಕ್ಕೆ ಕೆಲಸ ಬಿಟ್ಟಿದ್ದಾಳೆ. ಈ ಎಲ್ಲ ಸಮಸ್ಯೆಗೆ ಕಾಂಡೋಮ್ ಕಂಪನಿ ಕಾರಣವೆಂದು ವಾಂಗ್, ಕಂಪನಿಗೆ ದೂರು ನೀಡಿದ್ದಾನೆ.
ಆದ್ರೆ ಕಂಪನಿ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಕಾಂಡೋಮ್ ಗುಣಮಟ್ಟ ಚೆನ್ನಾಗಿದೆ ಎಂದು ಹೇಳಿದೆ. ನಂತ್ರ ವಾಂಗ್ ಸ್ಥಳೀಯ ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ನೀಡಿದ್ದಾನೆ. ಕಂಪನಿಯ ಕಾಂಡೋಮ್ ಗುಣಮಟ್ಟವನ್ನು ಪರಿಶೀಲಿಸಬೇಕು ಮತ್ತು ಸೂಕ್ತ ಪರಿಹಾರ ನೀಡಬೇಕೆಂದು ಆತ ಆಗ್ರಹಿಸಿದ್ದಾನೆ. ಆದ್ರೆ ಆತನ ದೂರು ಸ್ವೀಕರಿಸಲು ಕಂಪನಿ ವಿಚಿತ್ರ ಷರತ್ತು ಹಾಕಿದೆ.
ಕಾಂಡೋಮ್‌ಗಳನ್ನು ಸರಿಯಾಗಿ ಬಳಸುವುದು ಹೇಗೆ ಎಂದು ತಿಳಿದಿರುವುದನ್ನು ಸಾಬೀತುಪಡಿಸಿದ ನಂತರವೇ ತನಿಖೆ ಎಂದು ಹೇಳಿದೆ. ಇದು ವಾಂಗ್ ಆಘಾತಕ್ಕೆ ಕಾರಣವಾಗಿದೆ. ಇದನ್ನು ಹೇಗೆ ಸಾಭೀತುಪಡಿಸುವುದು ಎಂದು ವಾಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಒಂದು ವೇಳೆ ಅಧಿಕಾರಿಗಳು ತನಿಖೆ ನಡೆಸದೆ ಹೋದಲ್ಲಿ ಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾನೆ.