ಕೊರೊನಾದಿಂದ ರಕ್ಷಣೆಬೇಕೆಂದ್ರೆ ಪದೇ ಪದೇ ಕೈತೊಳೆಯುವುದು ಅನಿವಾರ್ಯವಾಗಿದೆ. ಆದ್ರೆ ಬೇಕರಿಯೊಂದರಲ್ಲಿ ಪದೇ ಪದೇ ಕೈ ತೊಳೆಯಲು ಸಿಬ್ಬಂದಿಗೆ ಹೇಳಿದ್ದೇ ತಪ್ಪಾಗಿದೆ. ಸಿಬ್ಬಂದಿಯೊಬ್ಬನಿಗೆ ಬೇಕರಿ ಪರಿಹಾರ ನೀಡಬೇಕಾಗಿದೆ.
ಬೇಕರಿಯಲ್ಲಿ ಕೆಲಸ ಮಾಡ್ತಿದ್ದ ಸುಸಾನ್ ರಾಬಿನ್ಸನ್ ಕೆಲಸ ಮಾಡುವ ಸಂದರ್ಭದಲ್ಲಿ 20 ಬಾರಿ ಕೈ ತೊಳೆಯುತ್ತಿದ್ದನಂತೆ. ಪ್ರತಿ ದಿನ ಹೀಗೆ ಮಾಡಿದ್ದರಿಂದ ಆತನಿಗೆ ಚರ್ಮ ರೋಗ ಬಂದಿದೆ. ಈ ಬಗ್ಗೆ ಆತ ದೂರು ನೀಡಿದ್ದಾನೆ. ಇದ್ರ ಪರಿಣಾಮವಾಗಿ ಬೇಕರಿ, ಉದ್ಯೋಗಿಗೆ 43,81,495 ರೂಪಾಯಿ ಪರಿಹಾರ ನೀಡಿದೆ.
ಸುಸಾನ್ ರಾಬಿನ್ಸನ್, ವೆಸ್ಟ್ ಯಾರ್ಕ್ ಶೈರ್ ನ ವೇಕ್ ಫೀಲ್ಡ್ ನಲ್ಲಿರುವ ಸ್ಪೀಡಿಬೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಕಂಪನಿಯು ದೊಡ್ಡ ಸೂಪರ್ಮಾರ್ಕೆಟ್ ಸರಪಳಿಗಳಿಗಾಗಿ ಕೇಕ್ ಸೇರಿದಂತೆ ಬೇಯಿಸಿದ ಪದಾರ್ಥವನ್ನು ಮಾರಾಟ ಮಾಡುತ್ತದೆ. ಕಂಪನಿಯಲ್ಲಿ ಕ್ರಿಸ್ ಮಸ್ ಗಾಗಿ ತಯಾರಿ ಜೋರಾಗಿ ನಡೆದಿತ್ತು. ಪದೇ ಪದೇ ಕೈತೊಳೆದಿದ್ದರಿಂದ ಕೈಗಳು ಕೆಂಪಾಗಿ, ತುರಿಕೆ ಕಾಣಿಸಿಕೊಂಡಿತ್ತು. ರಾಸಾಯನಿಕದಿಂದಾಗಿ ಕೈಗಳು ಹೀಗಾಗಿವೆ ಎಂದು ವೈದ್ಯರು ಹೇಳಿದ್ದರು. ಈ ಬಗ್ಗೆ ಕಂಪನಿ ಯಾವುದೇ ಕ್ರಮಕೈಗೊಂಡಿರಲಿಲ್ಲ, 2020ರಲ್ಲಿ ಕಂಪನಿಗೆ ಬೆಂಕಿ ಕಾಣಿಸಿಕೊಂಡು ಕಂಪನಿ ಮುಚ್ಚಿದ ನಂತ್ರ ಉದ್ಯೋಗಿಗಳನ್ನು ಬೇರೆ ಕಂಪನಿಗೆ ವರ್ಗಾಯಿಸಲಾಗಿತ್ತು. ಆದ್ರೆ ಸುಸಾನ್ ಗೆ ಕೆಲಸ ನೀಡಿರಲಿಲ್ಲ. ಈ ಬಗ್ಗೆ ಸುಸಾನ್ ದೂರು ನೀಡಿದ್ದ.