alex Certify ಉದ್ಯೋಗಿಗಳಿಗೆ 11 ದಿನಗಳ ರಜೆ ಘೋಷಿಸಿದ Meesho; ಮಾನಸಿಕ ಆರೋಗ್ಯ ಕಾಪಾಡಲು ಈ ಕ್ರಮ ಎಂದ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳಿಗೆ 11 ದಿನಗಳ ರಜೆ ಘೋಷಿಸಿದ Meesho; ಮಾನಸಿಕ ಆರೋಗ್ಯ ಕಾಪಾಡಲು ಈ ಕ್ರಮ ಎಂದ ಕಂಪನಿ

ಇ – ಕಾಮರ್ಸ್ ಕಂಪನಿ Meesho ತನ್ನ ಉದ್ಯೋಗಿಗಳಿಗೆ ಬಂಪರ್ ಕೊಡುಗೆಯೊಂದನ್ನು ಘೋಷಿಸಿದೆ. 11 ದಿನಗಳ ಕಾಲ ತನ್ನ ಎಲ್ಲಾ ಉದ್ಯೋಗಿಗಳಿಗೆ ರಜೆ ಘೋಷಿಸಿದ್ದು, ಒತ್ತಡ ರಹಿತವಾಗಿ ಕಾರ್ಯನಿರ್ವಹಿಸಲು ಹಾಗೂ ಉದ್ಯೋಗಿಗಳ ಮಾನಸಿಕ ಆರೋಗ್ಯ ಕಾಪಾಡಲು ಇದು ಅತ್ಯಗತ್ಯ ಎಂದು ಪ್ರತಿಪಾದಿಸಿದೆ.

ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉದ್ಯೋಗಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಾರೆ. ಹೀಗಾಗಿ ಅವರುಗಳಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಈ ರಜೆ ಬಳಿಕ ಅವರು ಮತ್ತಷ್ಟು ಉತ್ಸಾಹ ಭರಿತರಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದೆ.

ಹೀಗಾಗಿ ಅಕ್ಟೋಬರ್ 22ರಿಂದ ನವೆಂಬರ್ 1ರ ವರೆಗೆ ತನ್ನ ಉದ್ಯೋಗಿಗಳಿಗೆ ರಜೆ ಇರಲಿದೆ ಎಂದು Meesho ಸಂಸ್ಥಾಪಕ ಹಾಗೂ ಸಿಟಿಓ ಸಂಜೀವ್ ಬರ್ನವಾಲ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಕಳೆದ ವರ್ಷವೂ Meesho ತನ್ನ ಉದ್ಯೋಗಿಗಳಿಗೆ ಇದೇ ರೀತಿಯ ಸೌಲಭ್ಯವನ್ನು ನೀಡಿತ್ತು. ಉದ್ಯೋಗಿಗಳಿಗೆ ಉತ್ತಮ ವಾತಾವರಣ ನಿರ್ಮಿಸುವಲ್ಲಿ Meesho ಈ ಹಿಂದೆಯೂ ಹಲವಾರು ಕ್ರಮಗಳನ್ನು ಕೈಗೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...