ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಪಿಎಂ ಇಂಟರ್ನ್ ಶಿಪ್ ಯೋಜನೆಯಡಿ ಶುಕ್ರವಾರದವರೆಗೆ 193 ಕಂಪನಿಗಳು ನೋಂದಣಿಯಾಗಿದ್ದು, 90,800 ಯುವಜನರಿಗೆ ವಿವಿಧ ವೃತ್ತಿ ತರಬೇತಿ ಸಿಗಲಿದೆ.
ಜುಬಿಲೆಂಟ್ ಫುಡ್ ವರ್ಕ್ಸ್, ಮಾರುತಿ ಸುಜುಕಿ ಇಂಡಿಯಾ, ಐಷರ್ ಮೋಟರ್ಸ್, ಎಲ್ ಅಂಡ್ ಟಿ, ಮುತ್ತೂಟ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ನೋಂದಣಿ ಮಾಡಿಕೊಂಡಿರುವ ಪ್ರಮುಖ ಕಂಪನಿಗಳಾಗಿದೆ. ಈ ಯೋಜನೆ ಪೋರ್ಟಲ್ ನಲ್ಲಿ ಶನಿವಾರದಿಂದ ಯುವಕರ ನೋಂದಣಿ ಕೂಡ ಶುರುವಾಗಿದೆ.
ಡಿಸೆಂಬರ್ ನಿಂದ ಆರಂಭವಾಗಲಿರುವ ಈ ಪ್ರಾಯೋಗಿಕ ಯೋಜನೆಗೆ ಕೇಂದ್ರ ಸರ್ಕಾರ 800 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಿದೆ. ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೆ 1.25 ಲಕ್ಷ ಯುವಕರಿಗೆ ಇಂಟರ್ನ್ ಶಿಪ್ ನೀಡುವ ಗುರಿ ಹೊಂದಲಾಗಿದೆ.
ತೈಲ, ಅನಿಲ, ಎನರ್ಜಿ, ಪ್ರವಾಸ, ಆತಿಥ್ಯ, ಬ್ಯಾಂಕಿಂಗ್, ಹಣಕಾಸು ಸೇವಾವಲಯಕ್ಕೆ ಸೇರಿದ ಕಂಪನಿಗಳು ಹೆಚ್ಚಾಗಿ ನೋಂದಣಿ ಮಾಡಿಕೊಂಡಿವೆ. ಉತ್ಪಾದನೆ ಮತ್ತು ತಯಾರಿಕೆ, ನಿರ್ವಹಣೆ, ಮಾರಾಟ ಮತ್ತು ಮಾರುಕಟ್ಟೆ ಸೇರಿ 20ಕ್ಕೂ ಹೆಚ್ಚು ವಲಯಗಳಲ್ಲಿ ಯುವಜನರಿಗೆ ಇಂಟರ್ನ್ ಶಿಪ್ ನೀಡುವ ಗುರಿ ಹೊಂದಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ 137 ಜಿಲ್ಲೆಗಳಲ್ಲಿ ಯುವ ಜನರಿಗೆ ವಿವಿಧ ವೃತ್ತಿ ತರಬೇತಿ ನೀಡಲಾಗುವುದು. ಆಯ್ಕೆಯಾದವರಿಗೆ ಪ್ರತಿ ತಿಂಗಳು 5000 ರೂ. ಭತ್ಯೆ ನೀಡಲಾಗುತ್ತದೆ. ಒಂದು ಬಾರಿಗೆ 6000 ರೂ. ನೀಡಲಾಗುವುದು ಎನ್ನಲಾಗಿದೆ.