
ಬರ್ಮಿಂಗ್ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಉದ್ಘಾಟನಾ ಸಮಾರಂಭಕ್ಕೆ ಇನ್ನು ಎರಡು ದಿನಗಳಷ್ಟೇ ಬಾಕಿ ಉಳಿದಿರುವ ಮಧ್ಯೆ ಭಾರತದ ಮತ್ತೋರ್ವ ಅಥ್ಲೀಟ್ ಉದ್ದೀಪನ ಪರೀಕ್ಷೆಯಲ್ಲಿ ವಿಫಲರಾಗಿದ್ದು, ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ.
ಭಾರತದ ಮಹಿಳೆಯರ 4 x 100 ಮೀಟರ್ ರಿಲೇ ತಂಡದಲ್ಲಿ ಸ್ಥಾನ ಸಂಪಾದಿಸಿದ್ದ ಈ ಅಥ್ಲೀಟ್ ಈಗ ಸ್ಪರ್ಧೆಯಿಂದ ಹೊರ ಬಿದ್ದಿದ್ದು, ಇದರಿಂದಾಗಿ ಭಾರತದ ಮೂರನೇ ಸ್ಪರ್ಧಿ ಉದ್ದೀಪನ ಕಳಂಕ ಎದುರಿಸಿದಂತಾಗಿದೆ.
ಈ ಮೊದಲು ರಿಲೇ ತಂಡದ ಎಸ್. ಧನಲಕ್ಷ್ಮಿ ಮತ್ತು ತ್ರಿಪಲ್ ಜಂಪ್ ಪಟು ಐಶ್ವರ್ಯಾ ಬಾಬು ಉದ್ದೀಪನ ಪರೀಕ್ಷೆಯಲ್ಲಿ ವಿಫಲರಾಗಿ ಕಾಮನ್ವೆಲ್ತ್ ಗೇಮ್ಸ್ ನಿಂದ ಹೊರ ಬಿದ್ದಿದ್ದರು. ಇದೀಗ ಸಿಕ್ಕಿಬಿದ್ದಿರುವ ಮತ್ತೊಬ್ಬ ಅಥ್ಲೀಟ್ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.