ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಕಳೆದ ರಾತ್ರಿ ಅದ್ದೂರಿ ಚಾಲನೆ ಸಿಕ್ಕಿದ್ದು, ಮೊದಲ ದಿನವಾದ ಇಂದು ಭಾರತೀಯ ಸ್ಪರ್ಧಿಗಳು ಪಾಲ್ಗೊಳ್ಳಲಿರುವ ಕ್ರೀಡೆಗಳ ವಿವರ ಇಂತಿದೆ.
ಟಿ ಟ್ವೆಂಟಿ ಕ್ರಿಕೆಟ್ ಸಂಜೆ 4:30 ರಿಂದ ಆರಂಭವಾಗಲಿದ್ದು, ಆಸೀಸ್ ವಿರುದ್ಧ ಭಾರತೀಯರು ಲೀಗ್ ಪಂದ್ಯವನ್ನಾಡಲಿದ್ದಾರೆ.
ಸಂಜೆ 6:30 ರಿಂದ ನಡೆಯಲಿರುವ ಮಹಿಳಾ ಹಾಕಿ ಪಂದ್ಯದಲ್ಲಿ ಘಾನಾ ವಿರುದ್ಧ ಲೀಗ್ ಪಂದ್ಯ ಇರಲಿದೆ.
ಸ್ಕ್ವಾಷ್ ಪಂದ್ಯದ ಪುರುಷರ ಸಿಂಗಲ್ಸ್ ನಲ್ಲಿ ಅಭಯ್ ಸಿಂಗ್, ಮಹಿಳಾ ಸಿಂಗಲ್ಸ್ ನಲ್ಲಿ ಸುನೈನಾ ಕುರುವಿಲ, ಅನಾಹತ್ ಸಿಂಗ್ ಆಡಲಿದ್ದಾರೆ.
ಪುರುಷರ ಮತ್ತು ಮಹಿಳಾ ತಂಡಗಳ ಟೇಬಲ್ ಟೆನಿಸ್ ಲೀಗ್ ಪಂದ್ಯಗಳು ನಡೆಯಲಿದೆ.
ಪಾಕಿಸ್ತಾನದ ವಿರುದ್ಧ ಬ್ಯಾಡ್ಮಿಂಟನ್ ಮಿಶ್ರತಂಡ ಲೀಗ್ ಪಂದ್ಯ ನಡೆಯಲಿದೆ.
ಬಾಕ್ಸಿಂಗ್ ಪುರುಷರ ವಿಭಾಗದಲ್ಲಿ ಶಿವ ಥಾಪಾ, ರೋಹಿತ್ ಟೋಕಸ್, ಸುಮಿತ್ ಕುಂಡು, ಆಶಿಶ್ ಕುಮಾರ್ ಮೊದಲ ಸುತ್ತಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.