ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಇ-ಗವರ್ನೆನ್ಸ್ ಸೇವೆಗಳು ಭಾರತ ಸರ್ಕಾರ ಮತ್ತು ಐಟಿ ದಿಗ್ಗಜ ಇನ್ಫೋಸಿಸ್ ದೇಶದ 10-22 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲ್ಯಾಭಿವೃದ್ಧಿಗೆಂದು ಕೈ ಜೋಡಿಸಿವೆ.
ಗ್ರಾಮಿಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ವಿಶೇಷ ಒತ್ತು ನೀಡಲಿರುವ ಈ ಅಭಿಯಾನದಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದಡಿ ಬರುವ ವಿಶೇಷ ಉದ್ದೇಶದ ಸಂಸ್ಥೆ ಸಿಎಸ್‌ಸಿ, ಇನ್ಫೋಸಿಸ್‌ನ ಸ್ಪ್ರಿಂಗ್‌ಬೋರ್ಡ್ ಡಿಜಿಟಲ್ ಪ್ಲಾಟ್‌ಫಾರಂ ಜೊತೆಗೆ ಕೈ ಜೋಡಿಸಿ, ವಿದ್ಯಾರ್ಥಿಗಳಲ್ಲಿ ಉದ್ಯೋಗ ಪಡೆಯುವ ಸಾಧ್ಯತೆಗಳನ್ನು ವರ್ಧಿಸುವಂಥ ಕೌಶಲ್ಯಗಳ ಅಭಿವೃದ್ಧಿಗೆ ಮುಂದಾಗಲಿದೆ.
ಮತದಾರರಿಗೆ ಮುಖ್ಯ ಮಾಹಿತಿ: ವೋಟರ್ ಐಡಿಗೆ ಆಧಾರ್ ಜೋಡಣೆಗೆ ಇಂದು ವಿಧೇಯಕ ಮಂಡನೆ
ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನದ ಅಡಿ ಗ್ರಾಮಾಂತರ ಪ್ರದೇಶದ ಆರು ಕೋಟಿ ಮಂದಿಗೆ ಡಿಜಿಟಲ್ ಕೌಶಲ್ಯ ತುಂಬುವ ಅಭಿಯಾನ ಇದಾಗಿದೆ ಎಂದು ಸಿಎಸ್‌ಸಿ ಇ-ಗವರ್ನೆನ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕೆ ತ್ಯಾಗಿ ತಿಳಿಸಿದ್ದಾರೆ.