ನಕಲಿ ಔಷಧಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಮೂಲಗಳ ಪ್ರಕಾರ ಔಷಧೀಯ ಉತ್ಪನ್ನಗಳಲ್ಲಿ ಶೇಕಡ 20ರಷ್ಟು ನಕಲಿ ಎಂದು ಹೇಳಲಾಗಿದ್ದು, ಹೀಗಾಗಿ ಕಠಿಣ ಕ್ರಮಕ್ಕೆ ನಿರ್ಧರಿಸಲಾಗಿದೆ.
ಔಷಧದ ಪಾಕೆಟ್ ಮೇಲೆ ಬಾರ್ ಕೋಡ್, ಕ್ಯೂಆರ್ ಕೋಡ್ ಮುದ್ರಣಕ್ಕೆ ಚಿಂತನೆ ನಡೆಸಲಾಗಿದ್ದು, ಆರಂಭಿಕ ಹಂತದಲ್ಲಿ ಡೋಲೋ, ಥೈರೋ ನಾರ್ಮ್, ಸಾರಿಡಾನ್ ಕಾಲ್ ಪಾಲ್ ಸೇರಿದಂತೆ 300 ಬ್ರಾಂಡ್ ಗಳಿಗೆ ಇದನ್ನು ಅಳವಡಿಸಲಾಗುತ್ತದೆ.
ಔಷಧದ ಪ್ಯಾಕೆಟ್ ಮೇಲೆ ಇರುವ ಬಾರ್ ಕೋಡ್, ಕ್ಯೂಆರ್ ಕೋಡ್ ನಲ್ಲಿ ಔಷಧದ ಹೆಸರು, ಬ್ರಾಂಡ್ ಹೆಸರು, ತಯಾರಕರ ಹೆಸರು ಮತ್ತು ವಿಳಾಸ, ತಯಾರಿಕೆಯ ದಿನಾಂಕ, ಬ್ಯಾಚ್ ಸಂಖ್ಯೆ, ಎಕ್ಸ್ಪೆರಿ ದಿನಾಂಕ ಹಾಗೂ ಉತ್ಪಾದನಾ ಪರವಾನಿಗೆ ನಂಬರ್ ಇರಲಿ ಎಂದು ತಿಳಿದುಬಂದಿದೆ.