alex Certify ಕೊರೊನಾ ಸಾಂಕ್ರಾಮಿಕದ ಬಳಿಕ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಾಗಿದೆ ಈ ಮಹತ್ವದ ಬದಲಾವಣೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಾಂಕ್ರಾಮಿಕದ ಬಳಿಕ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಾಗಿದೆ ಈ ಮಹತ್ವದ ಬದಲಾವಣೆ….!

ಭಾರತೀಯ ಗ್ರಾಹಕರು ಸ್ಮಾರ್ಟ್​ಫೋನ್​ಗಳತ್ತ ಹೆಚ್ಚು ಒಲವು ತೋರುತ್ತಿದ್ದು ಬೆಲೆಬಾಳುವ ಸ್ಮಾರ್ಟ್​ಫೋನ್​ಗಳನ್ನು ಖರೀದಿ ಮಾಡುತ್ತಿದ್ದಾರೆ. ಜುಲೈ ಹಾಗೂ ಆಗಸ್ಟ್​ ತಿಂಗಳಲ್ಲಿ ಸ್ಮಾರ್ಟ್​ಫೋನ್​ ಮಾರಾಟದ ಬೆಲೆಯು ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಕೆ ಮಾಡಿದರೆ 19 ಪ್ರತಿಶತಕ್ಕೆ ಏರಿಕೆಯಾಗಿದೆ. ಹಬ್ಬದ ಋತುವಿನಲ್ಲಿ ಈ ಪ್ರಮಾಣವು ಇನ್ನಷ್ಟು ಏರಿಕೆಯಾಗಲಿದೆ ಎಂದು ಸಮೀಕ್ಷೆಯು ಹೇಳಿದೆ.

ಆನ್​ಲೈನ್​ ಮಾರುಕಟ್ಟೆ ದೈತ್ಯ ಕಂಪನಿಗಳಾದ ಅಮೆಜಾನ್​ ಹಾಗೂ ಫ್ಲಿಪ್​ಕಾರ್ಟ್​ ಗ್ರೇಟ್​ ಇಂಡಿಯಾ ಫೆಸ್ಟಿವಲ್​ ಹಾಗೂ ಬಿಗ್​ ಬಿಲಿಯನ್​ ಡೇ ಅಡಿಯಲ್ಲಿ ವಿನಾಯ್ತಿ ಘೋಷಿಸಿದ್ದು ಸ್ಮಾರ್ಟ್​ ಫೋನ್​ಗಳ ಖರೀದಿ ಮತ್ತಷ್ಟು ಹೆಚ್ಚಾಗಿದೆ. ನವೆಂಬರ್​ 4ರಂದು ಈ ಸೀಸನ್​ ಕೊನೆಗೊಳ್ಳಲಿದೆ.

BIG NEWS: ಕುಮಾರಸ್ವಾಮಿಯಿಂದ ಸೂಟ್ ಕೇಸ್ ರಾಜಕಾರಣ; ಜಮೀರ್ ಅಹ್ಮದ್ ಗಂಭೀರ ಆರೋಪ

ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನತೆಯ ಉಳಿತಾಯ ಹೆಚ್ಚಾಗಿದಿದ್ದರಬಹುದು. ಇದರಿಂದ ಹೆಚ್ಚಿನ ಮೊಬೈಲ್​ ಕೊಳ್ಳುವ ಆಸೆ ಉಂಟಾಗಿದ್ದಿರಬಹುದು ಎಂದು ಕೌಂಟರ್​ಪಾಯಿಂಟ್​ ವಿಶ್ಲೇಷಕ ಪ್ರಾಚಿರ್​ ಸಿಂಗ್​ ಹೇಳಿದ್ದಾರೆ. ಭಾರತದಲ್ಲಿ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ನಿರಂತರ ಬೆಳವಣಿಗೆ ಕಂಡುಬರ್ತಿದೆ. ಕಳೆದ ವರ್ಷದ ಹಬ್ಬದ ಋತುವಿಗೆ ಹೋಲಿಕೆ ಮಾಡಿದರೆ ಈ ವರ್ಷ ಸ್ಮಾರ್ಟ್​ ಫೋನ್​ ಮಾರುಕಟ್ಟೆಯು 7 ಪ್ರತಿಶತ ಬೆಳವಣಿಗೆ ಕಂಡಿದೆ ಎಂದು ಹೇಳಿದ್ರು.

ಪ್ರತಿ ದಿನ ಕನಿಷ್ಠ 7 ಗಂಟೆ ನಿದ್ರೆ ಮಾಡದೇ ಇದ್ರೆ ಕಾಡತ್ತೆ ಈ ಸಮಸ್ಯೆ

ಟೆಕ್​ಆರ್ಚ್​ ಸ್ಥಾಪಕ ಹಾಗೂ ಮುಖ್ಯ ಅನಾಲಿಸ್ಟ್​ ಫೈಸಲ್​ ಕವೂಸಾ ಕೂಡ ಈ ವಿಚಾರವಾಗಿ ಮಾತನಾಡಿದ್ದು, ಈ ಹಬ್ಬದ ಋತುವಿನಲ್ಲಿ ಹೆಚ್ಚಿನ ಜನರು 20 ಸಾವಿರ ಆಸುಪಾಸಿನ ಮೊಬೈಲ್​ಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಜನತೆ ತಮ್ಮ ಹಳೆಯ ಮೊಬೈಲ್​​ಗಳಿಂದ ಹೊಸ ಮೊಬೈಲ್​ಗಳತ್ತ ಮುಖ ಮಾಡಿದ್ದು ಹಳೆಯ ಮೊಬೈಲ್​ಗೆ ಹೋಲಿಕೆ ಮಾಡಿದ್ರೆ ಹೊಸ ಮೊಬೈಲ್​ಗೆ 15 ರಿಂದ 30 ಪ್ರತಿಶತ ಹೆಚ್ಚಿನ ದರವನ್ನು ನೀಡ್ತಿದ್ದಾರೆ. ನಮ್ಮ ದೇಶದಲ್ಲಿ 70 ಪ್ರತಿಶತ ಜನರು 15 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್​ಗಳನ್ನು ಹೊಂದಿದ್ದರು. ಆದರೆ ಈಗ ಜನತೆ ದುಬಾರಿ ಬೆಲೆಯ ಫೋನ್​ಗಳತ್ತ ಮುಖ ಮಾಡ್ತಿದ್ದಾರೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...