ಅಮೆರಿಕದ ಖಗೋಳಶಾಸ್ತ್ರಜ್ಞ ಗ್ರೆಗೊರಿ ಲಿಯೋನಾರ್ಡ್ ಅವರು ಕಂಡು ಹಿಡಿದ ‘ಲಿಯೋನಾರ್ಡ್’ ಹೆಸರಿನ ಧೂಮಕೇತು ಭೂಮಿ ಸಮೀಪಕ್ಕೆ ಬಂದಿದೆ. ಒಂದು ತಿಂಗಳ ಕಾಲ ಆಕಾಶಕಾಯದ ದರ್ಶನ ಇರಲಿದೆ.
ಸೆಕೆಂಡ್ ಗೆ ಸುಮಾರು 70 ಕಿಲೋಮೀಟರ್ ವೇಗದಲ್ಲಿ ಚಲಿಸುವ ಲಿಯೋನಾರ್ಡ್ ಧೂಮಕೇತುವನ್ನು ಗ್ರೆಗೋರಿ ಲಿಯೋನಾರ್ಡ್ ಅವರು ಆರಿಜೋನಾದ ಮೌಂಟ್ ಲೆಮ್ಡನ್ ಅಬ್ಸರ್ವೇಟರಿಯಲ್ಲಿ 2021 ರ ಜನವರಿ 3 ರಂದು ಕಂಡುಹಿಡಿದಿದ್ದು, ಅವರ ಹೆಸರಿನಿಂದಲೇ ಇದನ್ನು ಗುರುತಿಸಲಾಗಿದೆ.
ಧೂಮಕೇತು ಧೂಳು ಮತ್ತು ಹೊಗೆಯಿಂದ ಕೂಡಿದ ನಿರ್ಜೀವ ವಸ್ತುವಾಗಿರುತ್ತದೆ. ಆಗಸದಲ್ಲಿ ಹಲವಾರು ಧೂಮಕೇತುಗಳು ಅಲೆದಾಡುತ್ತಲೇ ಇರುತ್ತದೆ. ಈ ಹಿಂದೆ ‘ಹ್ಯಾಲಿ’ ಧೂಮಕೇತು ಗಮನ ಸೆಳೆದಿತ್ತು
ಬರಿಗಣ್ಣಿಗೆ ಕಾಣುವ ಮತ್ತು ಬೈನಾಕ್ಯುಲರ್ ಗಳಲ್ಲಿ ಸ್ಪಷ್ಟವಾಗಿ ಗೋಚರಿಸುವ ಲಿಯೋನಾರ್ಡ್ ಧೂಮಕೇತು ಹೈಪರ್ ಬೋಲಿಕ್ ಪಥವನ್ನು ಹೊಂದಿದ್ದು ನಮ್ಮ ಸೌರವ್ಯೂಹದಿಂದ ಒಂದು ಬಾರಿ ಹಾದುಹೋಗಲಿದೆ ಎಂದು ಹೇಳಲಾಗಿದೆ.
ಇದು ಡಿಸೆಂಬರ್ 12 ರಂದು ಭೂಮಿಗೆ ಹತ್ತಿರದಲ್ಲಿದೆ. ತಿಂಗಳಾದ್ಯಂತ ಗೋಚರಿಸುತ್ತದೆ. ಡಿಸೆಂಬರ್ 14 ರಂದು ಸೂರ್ಯಾಸ್ತದ ನಂತರ, ಧೂಮಕೇತು ಸಂಜೆ ಆಕಾಶದಲ್ಲಿ ಗೋಚರಿಸುತ್ತದೆ. ಖಗೋಳಶಾಸ್ತ್ರಜ್ಞರು ಡಿಸೆಂಬರ್ 17 ಅದನ್ನು ನೋಡಲು ಉತ್ತಮ ದಿನ ಎಂದು ನಂಬುತ್ತಾರೆ.
ಅದನ್ನು ನೋಡಲು ಉತ್ತಮ ಸಮಯವೆಂದರೆ ಮುಂಜಾನೆ, ಪೂರ್ವದ ಕಡೆಗೆ, ಸೂರ್ಯೋದಯಕ್ಕೆ ಒಂದೆರಡು ಗಂಟೆಗಳ ಮೊದಲು. ಇದು ಮುಂಜಾನೆ ಮೊದಲು ಆಕಾಶದಲ್ಲಿ ಅದರ ಅತ್ಯುನ್ನತ ಬಿಂದುವಿಗೆ ಇರುತ್ತದೆ. ಇದು ಕೆಲವೇ ದಿನಗಳಲ್ಲಿ ಅನೇಕ ನಕ್ಷತ್ರಪುಂಜಗಳ ಮೂಲಕ ಹಾದುಹೋಗುತ್ತದೆ. ಧೂಮಕೇತು ಸೂರ್ಯನನ್ನು ಹಾದುಹೋದ ನಂತರ ಸೌರವ್ಯೂಹದಿಂದ ಹೊರಹಾಕಲ್ಪಡುತ್ತದೆ.