ಕಾಮೆಡಿಯನ್ ನಟಿ ಅದಿತಿ ಮಿತ್ತಲ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡ ಹೃದಯಸ್ಪರ್ಶಿ ಕಥೆಯೊಂದು ವೈರಲ್ ಆಗಿದೆ.
ಮುಂಬಯಿಯಲ್ಲಿ ಗಣೇಶ ಮಹೋತ್ಸವದ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ತನ್ನ ಮಗನನ್ನು ಪತ್ತೆ ಮಾಡಿದ ಓಲಾ ಕ್ಯಾಬ್ ಚಾಲಕನ ಕಥೆ ಇದಾಗಿದೆ. ಚಾಲಕನ ಅರ್ಥಪೂರ್ಣ ವರ್ತನೆಯಿಂದಾಗಿ ಈ ಕಥೆಯು ನೆಟ್ಟಿಗರಿಗೆ ವಿಶೇಷವಾಗಿ ಇಷ್ಟವಾಗಿದೆ.
ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಹಾದಿಯಲ್ಲಿ ಕ್ಯಾಬ್ ಚಾಲಕ ತನ್ನ ಫೋನ್‌ನಲ್ಲಿ ಆತಂಕದಿಂದ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ಅದಿತಿ, ಈ ಅನುಭವ ಹಂಚಿಕೊಂಡಿದ್ದಾರೆ.
ಭಾರತ್ ಬಂದ್: ಕಿಸಾನ್ ಮೋರ್ಚಾ ಬೆಂಬಲಕ್ಕೆ ನಿಂತ ಕಾಂಗ್ರೆಸ್, ಟಿಡಿಪಿ ಮತ್ತು ಎಡರಂಗ
ತನ್ನ ಮೂರು ವರ್ಷದ ಮಗನ ಸುಳಿವು ಬೆನ್ನತ್ತಿ ಸತತ ಒಂದು ಗಂಟೆಗೂ ಹೆಚ್ಚು ಕಾಲ ಬಹಳಷ್ಟು ಮಂದಿಗೆ ಕರೆ ಮಾಡಿದ ಕ್ಯಾಬ್ ಚಾಲಕನಿಗೆ ಮತ್ತೊಂದು ತುದಿಯಿಂದ ಬರೀ ನಕಾರಾತ್ಮಕ ಪ್ರತಿಕ್ರಿಯೆಗಳೇ ಬಂದಿವೆ. ವಿಷಯವನ್ನು ಕೇಳಿ ಕ್ಯಾಬ್ ಚಾಲಕನ ಪತ್ನಿಗೂ ತೀವ್ರ ನೋವುಂಟಾಗಿದೆ.
ಚಾಲಕನ ಪತ್ನಿಯ ಅಳುವನ್ನು ಕೇಳಿಸಿಕೊಂಡ ಅದಿತಿ, ತನ್ನನ್ನು ಎಸ್ಕಾರ್ಟ್ ಮಾಡಲು ಸಮಯ ವ್ಯರ್ಥ ಮಾಡದೇ ಮೊದಲು ಹೋಗಿ ಮಗುವನ್ನು ಹುಡುಕಲು ಆತನಿಗೆ ಸೂಚಿಸಿದ್ದಾರೆ. ಆದರೆ ತನಗೆ ದುಡ್ಡು ಬೇಕಾದ ಕಾರಣ ಹಾಗೆ ಹೋಗಲು ಆಗುವುದಿಲ್ಲ ಎಂದ ಚಾಲಕನಿಗೆ ಕ್ಯಾಬ್ ಶುಲ್ಕದ ಅಷ್ಟೂ ದುಡ್ಡನ್ನು ಭರಿಸಿದ ಅದಿತಿ ತಮ್ಮ ಮುಂದಿನ ಪಯಣಕ್ಕೆ ಆಟೋರಿಕ್ಷಾ ಏರಿದ್ದಾರೆ.
ಇದಾದ ಕೆಲವೇ ಕ್ಷಣಗಳಲ್ಲಿ ಕ್ಯಾಬ್ ಚಾಲಕನಿಗೆ ಆತನ ಪುತ್ರ ಸಿಕ್ಕಿದ್ದಾನೆ. ಕೂಡಲೇ ಅದಿತಿಗೆ ಕರೆ ಮಾಡಿದ ಚಾಲಕ ಈ ವಿಷಯ ತಿಳಿಸಿದ್ದಾನೆ. ಮಾರನೇ ದಿನ ತಾನು ಅದಿತಿರನ್ನು ಕ್ಯಾಬ್‌ನಲ್ಲಿ ಪಿಕ್ ಮಾಡಿದ ಜಾಗಕ್ಕೆ ಆಗಮಿಸಿದ ಚಾಲಕ ಆಕೆಗೆ ತೆಂಗಿನಕಾಯಿ ಮೋದಕಗಳನ್ನು ಕೊಟ್ಟಿದ್ದಾರೆ. ತಮ್ಮ ಸ್ನೇಹಿತರೊಬ್ಬರೊಂದಿಗೆ ಮೋದಕಗಳ ಬಗ್ಗೆ ಮಾತನಾಡುತ್ತಿದ್ದ ಅದಿತಿರ ಮಾತುಗಳನ್ನು ಕೇಳಿಸಿಕೊಂಡ ಕ್ಯಾಬ್ ಚಾಲಕನಿಗೆ ಮೋದಕದ ಐಡಿಯಾ ಬಂದಿದೆ.
ಈ ವಿಷಯ ತಿಳಿದ ಓಲಾ ಅದಿತಿಯವರನ್ನು ಸಂಪರ್ಕಿಸಿ ಚಾಲಕನ ವಿವರಗಳನ್ನು ಹಂಚಿಕೊಳ್ಳಲು ಕೋರಿ, ಕೂಡಲೇ ತನ್ನ ಹಾರೈಕೆಗಳನ್ನು ಚಾಲಕನಿಗೆ ರವಾನೆ ಮಾಡಿದೆ.
ಟ್ವೀಟ್‌ಗಳ ಸರಣಿಯನ್ನು ಗಮನಿಸಿದ ರಾಜ್ಯ ಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಇದೊಂದು ಹೃದಸ್ಪರ್ಶಿ ಕ್ಷಣವಾಗಿದೆ ಎಂದಿದ್ದಾರೆ.
ರೀಡರ್ಸ್ ಡೈಜೆಸ್ಟ್‌ನ ’ಲಾಸ್ಟ್ ವ್ಯಾಲೆಟ್’ ಪ್ರಯೋಗದಲ್ಲಿ ಮುಂಬಯಿ ಜಗತ್ತಿನ ಎರಡನೇ ಅತ್ಯಂತ ಪ್ರಾಮಾಣಿಕ ನಗರಿ ಎಂದು ಕಂಡುಬಂದಿದೆ.