ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಕುಟುಂಬ ಸದಸ್ಯರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಯಶ್ ರಾಠಿ ಅವರ ಮಾತುಗಳನ್ನು ಕೇಳಲಾರದೆ ಹಲವರು ಕಿವಿ ಮುಚ್ಚಿಕೊಂಡಿದ್ದರೆ ಮತ್ತಷ್ಟು ಮಂದಿ ಅಲ್ಲಿಂದ ಎದ್ದು ಹೊರಡಲು ಮುಂದಾಗಿದ್ದಾರೆ.
ಯಶ್ ರಾಠಿ ಅವರ ಸ್ಟ್ಯಾಂಡ್‌ಅಪ್ ಕಾಮಿಡಿಯ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಅಲ್ಲಿ ಅವರು ಅಸಭ್ಯ ಭಾಷೆ ಬಳಸಿರುವುದು ಕಂಡು ಬಂದಿದೆ. ಒಂದು ಹಂತದಲ್ಲಿ ಸಂಘಟನಾ ಸಮಿತಿಯ ಸದಸ್ಯರೊಬ್ಬರು ಮಧ್ಯಪ್ರವೇಶಿಸಿ, ವೇದಿಕೆಯ ಮೇಲೆ ರಾಠಿ ಅವರಿಗೆ ಷೋ ಕೊನೆಗೊಳಿಸುವಂತೆ ಸೂಚಿಸಿದ್ದಾರೆ.
ಈಗ ಭಾರತೀಯ ಜನತಾ ಯುವ ಮೋರ್ಚಾ, ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಕರ್ಣಿ ಸೇನೆಯು ಐಐಟಿ-ಭಿಲಾಯ್‌ನ ಆಡಳಿತ ಪೊಲೀಸರಿಗೆ ಔಪಚಾರಿಕ ದೂರುಗಳನ್ನು ಸಲ್ಲಿಸಿದೆ.
ಏತನ್ಮಧ್ಯೆ, ಐಐಟಿ-ಭಿಲಾಯ್‌ನ ಮ್ಯಾನೇಜ್‌ಮೆಂಟ್ ಈ ಘಟನೆ ಕುರಿತು ಪ್ರತಿಕ್ರಿಯಿಸಿ “ಅಶ್ಲೀಲ ಭಾಷೆ ಗಮನಕ್ಕೆ ಬಂದ ತಕ್ಷಣ ಪ್ರದರ್ಶನವನ್ನು ನಿಲ್ಲಿಸಲಾಯಿತು” ಎಂದು ತಿಳಿಸಿದೆ. ನಿರ್ದೇಶಕ ರಾಜೀವ್ ಪ್ರಕಾಶ್ ಅವರು ಸಂಸ್ಥೆಯ ಪ್ರತಿಷ್ಠೆಗೆ ಆದ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ.
ಯಶ್ ರಾಠಿ ವಿವಾದಕ್ಕೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಕಾರ್ಯಕ್ರಮವೊಂದರಲ್ಲಿ ಭಗವಾನ್ ರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಡೆಹ್ರಾಡೂನ್ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು.
IIT BHILAI में मिराज-5.0 का आयोजन किया गया,इस आयोजन में स्टैंडअप कॉमेडियन यश राठी ने प्रस्तुति दी,कॉमेडियन यश का एक घंटे का प्रोग्राम था, जिसे आधे घंटे में ही रोका गया, क्योंकि यश राठी ने अपने डार्क कॉमेडी की प्रस्तुति देना शुरू कर दिया। जिसे सुनकर प्रोफेसरों ने कान बंद कर दिए। pic.twitter.com/2xc2N2O8qN
— 𝑯𝑨𝑹𝑷𝑨𝑳 𝑺𝑰𝑵𝑮𝑯 🇮🇳. ਹੈਰੀ (@harpalsingh009) November 18, 2024