ಬೆಂಗಳೂರು: ಖಾಸಗಿ ಕಾಲೇಜುಗಳಲ್ಲಿನ ಇಂಜಿನಿಯರಿಂಗ್ ಸೀಟುಗಳ ಪ್ರವೇಶಕ್ಕೆ ನಡೆಸುವ ಕಾಮೆಡ್ –ಕೆ ಯುಜಿಇಟಿ 2022 ದೇಶಾದ್ಯಂತ ಆನ್ಲೈನ್ ಮೂಲಕ ಸುಸೂತ್ರವಾಗಿ ನಡೆದಿದೆ.
ರಾಜ್ಯದ 150 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸುಮಾರು 20 ಸಾವಿರ ಸೀಟುಗಳು ಹಾಗೂ ದೇಶದ ವಿವಿಧ 40 ವಿವಿಗಳಿಗೆ ಪ್ರವೇಶ ನೀಡಲು ಅರ್ಹತೆಗಾಗಿ ಈ ಪರೀಕ್ಷೆ ನಡೆಸಲಾಗಿದೆ. ರಾಜ್ಯದ 22 ಕೇಂದ್ರಗಳು ಸೇರಿದಂತೆ ದೇಶಾದ್ಯಂತ 154 ನಗರಗಳ 230 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಶೇಕಡ 94 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಜುಲೈ 5 ರಂದು ಕಾಮೆಡ್ –ಕೆ ಫಲಿತಾಂಶ ಬಿಡುಗಡೆ ಮಾಡುವುದಾಗಿ ಕಾಮೆಡ್-ಕೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್. ಕುಮಾರ್ ತಿಳಿಸಿದ್ದಾರೆ. ತಾತ್ಕಾಲಿಕ ಕೀ ಉತ್ತರಗಳನ್ನು ಜೂನ್ 22ರಂದು ಮತ್ತು ಅಂತಿಮ ಉತ್ತರಗಳನ್ನು ಜೂನ್ 30 ರಂದು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.