ಕಮಲಶಿಲೆ ಕುಂದಾಪುರದಿಂದ ಸುಮಾರು 35 ಕಿ.ಮೀ.ದೂರದಲ್ಲಿದೆ. ಬ್ರಾಹ್ಮೀ ದುರ್ಗಾ ಪರಮೇಶ್ವರಿ ಇಲ್ಲಿನ ಮುಖ್ಯ ದೇವತೆ. ಇಲ್ಲಿ ದುರ್ಗೆ ಲಿಂಗ ರೂಪಿಯಾಗಿ ನೆಲೆಸಿದ್ದಾಳೆ.
ಲಿಂಗದಲ್ಲಿ ಮೂರು ಸ್ವರ್ಣ ರೇಖೆಗಳಿದ್ದು ಮಹಾಲಕ್ಷ್ಮೀ, ಮಹಾಕಾಳಿ ಹಾಗೂ ಮಹಾಸರಸ್ವತಿ ಐಕ್ಯವಾಗಿದ್ದಾರೆ ಎನ್ನಲಾಗಿದೆ. ದೇವಳವು ಕುಬ್ಜಾ ನದಿ ಹಾಗೂ ನಾಗತೀರ್ಥಗಳ ಸಂಗಮ ಕ್ಷೇತ್ರವಾಗಿದೆ.
ಕಮಲಶಿಲೆಯಿಂದ ಸುಮಾರು 2 ಕಿ.ಮೀ. ದೂರದಲ್ಲಿ ಆದಿಸ್ಥಳ ಗುಹಾಲಯವಿದೆ. ಇಲ್ಲಿ ಹುಲಿಚಾವಡಿ, ಸಪ್ತಾರ್ಶ್ವ ಗುಹೆ, ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿಯ ಉದ್ಭವ ಲಿಂಗಗಳಿವೆ.
ಗುಹೆಯೊಳಗೆ ಸಂಪೂರ್ಣ ಕತ್ತಲಿರುವುದರಿಂದ ಒಳ ಹೋಗುವವರು ಟಾರ್ಚ್ ಹಿಡಿದೇ ಹೋಗಬೇಕು. ಸಿದ್ದಾಪುರದಿಂದ ಆರು ಕಿ.ಮೀ. ಮತ್ತು ಕುಂದಾಪುರದಿಂದ 35 ಕಿ.ಮೀ ದೂರವಿರುವ ಕಮಲಶಿಲೆಗೆ ಹೋಗಲು ಬಸ್ ವ್ಯವಸ್ಥೆ ಇದೆ.