ಬೆಂಗಳೂರು : ಸಿ.ಟಿ ರವಿ ಅವರೇ ನೀವು ದೇವರನ್ನು ನಂಬುತ್ತೀರಾ..? ನೀವು ಆ ಪದ ಬಳಸಿಲ್ಲ ಅಂದರೆ ಧರ್ಮಸ್ಥಳಕ್ಕೆ ಬಂದು ಆಣೆ-ಪ್ರಮಾಣ ಮಾಡಿ ಎಂದು ಎಂಎಲ್ ಸಿ ಸಿ.ಟಿ ರವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸವಾಲ್ ಹಾಕಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿ.ಟಿ ರವಿ ಅಶ್ಲೀಲ ಪದ ಬಳಕೆ ಆರೋಪದ ಕುರಿತು ಮಾತನಾಡಿದರು ಹಾಗೂ ಇದೇ ವೇಳೆ ಸಿಟಿ ರವಿಗೆ ಸವಾಲ್ ಹಾಕಿದರು.
ಸಿ.ಟಿ ರವಿ ಅವರೇ ನೀವು ದೇವರನ್ನು ನಂಬುತ್ತೀರಾ..? ನೀವು ಸದನದಲ್ಲಿ ಅಶ್ಲೀಲ ಪದ ಬಳಸಿಲ್ಲ ಎಂದಾದರೆ ನೀವು ನಿಮ್ಮ ಕುಟುಂಬದ ಜೊತೆ ಧರ್ಮಸ್ಥಳಕ್ಕೆ ಬಂದು ಆಣೆ-ಪ್ರಮಾಣ ಮಾಡಿ..ನಾನು ಕೂಡ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಬಂದು ಆಣೆ ಮಾಡುತ್ತೀನಿ ಎಂದಿದ್ದಾರೆ.
ಖಾನಾಪುರ ಠಾಣೆಯಲ್ಲಿ ಮೀಟಿಂಗ್ ಮಾಡಿದವರಾರು..? ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂತೆ. ನಿಮಗೆ ಎಷ್ಟು ಸ್ವಿಚ್ ಬಿದ್ದಿದೆ ಮಹಾನುಭಾವರೇ..? ನಿಮ್ಮ ಮುಖ ಉಳಿಸಿಕೊಳ್ಳಲು ನಕಲಿ ಪೆಟ್ಟು ಬೇಕಾಗಿತ್ತು..ಎನ್ ಕೌಂಟರ್ ಅನ್ನೋದು ಬಾಲಿಶ ಹೇಳಿಕೆ..ಅಷ್ಟು ದೊಡ್ಡವರೇ ಇಂತಹ ಮಾತು ಆಡಿದ್ದಾರೆ.. ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಆರೋಪ ಪ್ರಕರಣ ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಈ ಒಂದು ವಿಚಾರ ಭಾರಿ ಹೈಡ್ರಾಮಾಕ್ಕೆ ಕಾರಣವಾಗಿತ್ತು. ಪೊಲೀಸರು ಸಿಟಿ ರವಿಯನ್ನು ಬಂಧಿಸಿದ್ದರು. ಬಳಿಕ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.