alex Certify ಶಿರಸಿಯಲ್ಲಿ ನೆಲೆನಿಂತ ಸರ್ವಾಲಂಕೃತ ಭೂಷಿತಳಾದ ಶ್ರೀ ಮಾರಿಕಾಂಬಾ ದೇವಿ ದರ್ಶನವ ಮಾಡಿ ಬನ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿರಸಿಯಲ್ಲಿ ನೆಲೆನಿಂತ ಸರ್ವಾಲಂಕೃತ ಭೂಷಿತಳಾದ ಶ್ರೀ ಮಾರಿಕಾಂಬಾ ದೇವಿ ದರ್ಶನವ ಮಾಡಿ ಬನ್ನಿ

ಶಿರಸಿಯ ಮಾರಿಕಾಂಬಾ ದೇವಾಲಯವು ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಮಲೆನಾಡ ಹೆಬ್ಬಾಗಿಲು ಶಿರಸಿ ತಾಲೂಕಿನಲ್ಲಿ, ಶಿರಸಿಯಿಂದ ಬನವಾಸಿಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಈ ದೇವಾಲಯವಿದೆ. ಈ ದೇವಾಲಯದ ಪ್ರವೇಶದ್ವಾರದ ಎರಡೂ ಕಡೆಗಳಲ್ಲಿ ದೊಡ್ಡದಾದ ಆನೆಗಳ ಶಿಲ್ಪಗಳಿವೆ. ದೇವಾಲಯದಲ್ಲಿರುವ ವಿಶಾಲವಾದ ಸಭಾಭವನದ ಗೋಡೆಗಳ ಮೇಲೆ ವರ್ಣರಂಜಿತ ಚಿತ್ರಗಳು ರಾರಾಜಿಸುತ್ತಿವೆ.

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಸರ್ವಾಲಂಕೃತ ಭೂಷಿತಳಾದ ಶ್ರೀ ಮಾರಿಕಾಂಬಾ ದೇವಿಯ ವಿಗ್ರಹ ಮನಸೆಳೆಯುವಂತಿದೆ. ೧೬೮೮ರಲ್ಲಿ ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನವನ್ನು ನಿರ್ಮಿಸಲಾಯಿತು.

ಈ ಮಾರಿಕಾಂಬಾ ದೇವಿಯು ದುರ್ಗಾದೇವಿಯ ಇನ್ನೊಂದು ಅವತಾರ. ಎರಡು ವರ್ಷಗಳಿಗೊಮ್ಮೆ ಇಲ್ಲಿ ಮಾರಿಕಾಂಬಾ ಜಾತ್ರೆಯನ್ನು ಅತೀ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಇದು ಕರ್ನಾಟಕದಲ್ಲಿಯೇ ಅತಿ ದೊಡ್ಡ ಜಾತ್ರೆ. ಒಂಬತ್ತು ದಿನಗಳ ಕಾಲ ನಡೆಯುತ್ತದೆ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...