ತಲೆಹೊಟ್ಟು ಕಾಣಿಸಿಕೊಳ್ಳಲು ಧೂಳು, ಕೊಳೆ, ಜೀವನಶೈಲಿಯಲ್ಲಿ ಬದಲಾವಣೆಗಳೂ ಕಾರಣವಾಗುತ್ತವೆ. ಅದರೊಂದಿಗೆ ನೀವು ತಲೆ ಬಾಚುವ ವಿಧಾನವೂ ಕಾರಣವಾದೀತು ಎಂದರೆ ನೀವು ನಂಬುತ್ತೀರಾ.
ಹೌದು, ನೀವು ಸರಿಯಾಗಿ ತಲೆ ಬಾಚದಿದ್ದರೆ ತಲೆಹೊಟ್ಟು ನಿಮ್ಮನ್ನು ಅಂಟಿಕೊಂಡುಬಿಡುತ್ತದೆ. ಕೂದಲನ್ನು ಆರೋಗ್ಯವಾಗಿಡಲು ನೀವು ಪ್ಲಾಸ್ಟಿಕ್ ಗಿಂತ ಮರದ ಬಾಚಣಿಗೆಯನ್ನು ಬಳಸಿ. ಇದರಲ್ಲಿ ಸಿಕ್ಕುಗಳನ್ನು ಬಿಡಿಸುವುದೂ ಸುಲಭ. ಕೂದಲು ಉದುರುವುದೂ ಇದರಿಂದ ಕಡಿಮೆಯಾಗುತ್ತದೆ.
ಮರದ ಬಾಚಣಿಗೆ ನೀವು ತಲೆಗೆ ಹಚ್ಚಿಕೊಂಡ ಎಣ್ಣೆಯನ್ನು ಎಲ್ಲಾ ಕೂದಲಿನ ಎಳೆ ಎಳೆಗಳಿಗೆ ಸಮನಾಗಿ ಹಂಚುತ್ತದೆ. ಮತ್ತು ಕೂದಲು ಉದ್ದನಾಗಿ ಬೆಳೆಯಲು ನೆರವಾಗುತ್ತದೆ.
ಮರದ ಬಾಚಣಿಗೆಯಿಂದ ಬಾಚಿದಾಗ ಅದು ನಿಮ್ಮ ನೆತ್ತಿಯನ್ನು ನೇರವಾಗಿ ಸ್ಪರ್ಶಿಸುತ್ತದೆ ಮತ್ತು ಕೊಳೆಯನ್ನು ಹೊರತರುತ್ತದೆ. ಹೀಗಾದಾಗ ನಿಮ್ಮ ತಲೆಯಲ್ಲಿ ಡ್ಯಾಂಡ್ರಫ್ ಹುಟ್ಟುವ ಸಾಧ್ಯತೆ ಬಲು ಕಡಿಮೆ. ವಾರಕ್ಕೊಮ್ಮೆಯಾದರೂ ಬಾಚಣಿಗೆಯನ್ನು ತೊಳೆಯುವುದರಿಂದ ತಲೆಹೊಟ್ಟು ಶಾಶ್ವತವಾಗಿ ನಿಮ್ಮಿಂದ ದೂರವಾಗುತ್ತದೆ.