ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಅವರ ಮೇಲೆ ದುಷ್ಕರ್ಮಿಗಳು ಹಾನಿಕಾರಕ ರಾಸಾಯನಿಕ ಬಣ್ಣ ಎರಚಿದ್ದಾರೆ. ಸಂಸದೆ ಈ ಕುರಿತು ಆರೋಪ ಮಾಡಿದ್ದು, ಒರಟಾದ ವಸ್ತುಗಳಿಂದ ಕೂಡಿದ ಬಣ್ಣವನ್ನು ನನ್ನ ಮುಖದ ಮೇಲೆ ಎರಚಲಾಗಿದೆ ಎಂದು ದೂರಿದ್ದಾರೆ.
ಮೂರ್ನಾಲ್ಕು ಮಂದಿ ಟಿಎಂಸಿ ಬ್ಯಾಡ್ಜ್ ಧರಿಸಿದ ವ್ಯಕ್ತಿಗಳು ನನ್ನ ಸಮೀಪವೇ ನಿಂತಿದ್ದರು. ಅವರು ರಾಸಾಯನಿಕ ಮಿಶ್ರಿತ ಬಣ್ಣ ಎರಚಿದ್ದಾರೆ ಎಂದು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಲಾಕೆಟ್ ಚಟರ್ಜಿ ಆರೋಪಿಸಿದ್ದಾರೆ.
ಹೂಗ್ಲಿ ಜಿಲ್ಲೆಯ ಚಿನ್ಸುರಾ ಅಸೆಂಬ್ಲಿ ಕ್ಷೇತ್ರದಿಂದ ಅವರು ಕಣಕ್ಕಿಳಿದಿದ್ದು, ತೃಣಮೂಲ ಕಾಂಗ್ರೆಸ್ ಗೂಂಡಾಗಳು ರಾಸಾಯನಿಕ ಬಣ್ಣ ಎರಚಿ ದಾಳಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಶೀಘ್ರವೇ ಇದೆಲ್ಲಾ ಕೊನೆಯಾಗಲಿದೆ ಎಂದು ತಿಳಿಸಿದ್ದಾರೆ.