ನಾಲಿಗೆ ಮೇಲೆ ಕೂದಲು ಬೆಳೆಯುವುದನ್ನು ಎಲ್ಲಾದರೂ ಕೇಳಿದ್ದೀರಾ ? ಕೊಲರಾಡೋ ಸ್ಪ್ರಿಂಗ್ಸ್‌ನ ಕೆಮೆರಾನ್ ನ್ಯೂಸೋಮ್ ಹೆಸರಿನ 42 ವರ್ಷದ ಈ ಮಹಿಳೆಗೆ ಅತ್ಯಪರೂಪದ ಕ್ಯಾನ್ಸರ್ ಒಂದು ಬಂದಿರುವುದಾಗಿ ತಿಂಗಳುಗಳ ಹಿಂದೆ ಮಾಡಿದ ಸ್ಕ್ಯಾನಿಂಗ್ ನಿಂದ ತಿಳಿದು ಬಂದಿದೆ. ,
ಸ್ವಾಮಕ್ ಕೋಶ ಕಾರ್ಸಿನೋಮಾ ಎಂಬ ಕ್ಯಾನ್ಸರ್‌ನಿಂದ ಬಳಲುತ್ತಿರುವ ಕೆಮೆರಾನ್‌ಗೆ ನಾಲಿಗೆಯ ಚರ್ಮದ ಹಾಳಾಗಿತ್ತು. ಶಸ್ತ್ರಚಿಕಿತ್ಸೆ ಮೂಲಕ ಹಾಳಾದ ಆಕೆಯ ನಾಲಿಗೆಯ ಭಾಗವನ್ನು ಆಕೆ ಕಾಲಿನ ಅಂಗಾಂಶವೊಂದರಿಂದ ತುಂಬಲಾಗಿತ್ತು.
ರಕ್ತ ಹೀನತೆಗೆ ಕಾರಣವಾಗ್ತಿದೆ ಇದರ ಕೊರತೆ
ಕ್ಯಾನ್ಸರ್ ವಿರುದ್ಧದ ಯುದ್ಧದಲ್ಲಿ ಗೆದ್ದರೂ ಸಹ ಕ್ಯಾಮೆರಾನ್ ನಾಲಿಗೆ ಮೇಲೆ ಕೂದಲು ಬೆಳೆಯಲು ಆರಂಭಿಸಿದೆ. ಕಾಲಿನ ಅಂಗಾಂಶ ಹಾಕಲ್ಪಟ್ಟ ನಾಲಿಗೆ ಭಾಗದಲ್ಲೇ ಈಕೆಗೆ ಕೂದಲು ಬೆಳೆಯುತ್ತಿದೆ.
ಕ್ಯಾನ್ಸರ್ ಇದ್ದ ವೇಳೆ ಏನನ್ನೂ ತಿನ್ನಲು ಅಥವಾ ಕುಡಿಯಲು ಸಾಧ್ಯವಾಗದೇ ಇದ್ದ ಕಾರಣದಿಂದ ಏಳು ಕೆಜಿ ತೂಕ ಕಳೆದುಕೊಂಡಿದ್ದಾಗಿ ತಿಳಿಸುವ ಕ್ಯಾಮೆರಾನ್, ತನ್ನ ನಾಲಿಗೆ ಮೇಲೆ ಮಚ್ಚೆಯೊಂದನ್ನು ವೈದ್ಯರು ಕಂಡುಕೊಂಡ 3 ವರ್ಷಗಳ ಬಲಿಕ ತನಗೆ ಕ್ಯಾನ್ಸರ್ ಇದೆಯೆಂದು ತಿಳಿದುಬಂದಿದ್ದಾಗಿ ಹೇಳಿದ್ದಾರೆ.
ಅಸಲಿ ಅಂಗಾಂಶವಿರುವ ನಾಲಿಗೆಯ ಭಾಗದಿಂದ ಮಾತ್ರವೇ ತಾನೀಗ ಆಹಾರದ ರುಚಿ ಸವಿಯಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಕ್ಯಾಮೆರಾನ್.