ಕೊಲಂಬಿಯಾದ ನ್ಯಾಯಾಧೀಶರಾದ ವಿವಿಯನ್ ಪೊಲಾನಿಯಾ ವರ್ಚುವಲ್ ಕೋರ್ಟ್ ವಿಚಾರಣೆಯ ಸಮಯದಲ್ಲಿ ವಿಚಿತ್ರ ರೂಪದಲ್ಲಿ ಕಾಣಿಸಿಕೊಂಡು ಸೇವೆಯಿಂದ ಅಮಾನತುಗೊಂಡಿದ್ದಾರೆ.
ಹಿಯರಿಂಗ್ ವೇಳೆ ಆಕೆ ಹಾಸಿಗೆಯಲ್ಲಿದ್ದು, ಧೂಮಪಾನ ಮಾಡುವುದು ಕಂಡುಬಂದಿದೆ. ಇದಲ್ಲದೆ, ಅವರು ಟಾಪ್ ಮತ್ತು ಒಳ ಉಡುಪು ಧರಿಸಿದ್ದರು ಎಂಬುದು ವೀಡಿಯೊದಿಂದ ಸ್ಪಷ್ಟವಾಗುತ್ತದೆ.
ನವೆಂಬರ್ 18ರಂದು ರೆಕಾರ್ಡ್ ಮಾಡಲಾದ ವೀಡಿಯೊದ ಪ್ರಕಾರ ವಿವಿಯನ್ ಪೊಲಾನಿಯಾ ಕಾರ್ ಬಾಂಬ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಪ್ರಕರಣವನ್ನು ಆಲಿಸುತ್ತಿದ್ದರು.
ಆಡಳಿತಾತ್ಮಕ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ನಾರ್ಟೆ ಡಿ ಸ್ಯಾಂಟ್ಯಾಂಡರ್‌ನಲ್ಲಿರುವ ನ್ಯಾಯಾಂಗ ಶಿಸ್ತು ಆಯೋಗವು ಆಕೆಯನ್ನು ಮೂರು ತಿಂಗಳು ಅಮಾನತುಗೊಳಿಸಿದೆ.
ಈ ಹಿಂದೆಯೂ ವಿವಿಯನ್ ಪೊಲಾನಿಯಾ ತನ್ನ ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಾಕಿಕೊಂಡ ಕಾರಣಕ್ಕಾಗಿ ವಾಗ್ದಂಡನೆಗೆ ಒಳಗಾಗಿದ್ದರು.
ಈ ನಡುವೆ ಬ್ಲೂ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ, ಪೊಲಾನಿಯಾ ಅವರು ಅರೆಬೆತ್ತಲೆಯಾಗಿದ್ದರು ಎಂಬ ಆರೋಪ ವಿರೋಧಿಸಿದ್ದಾರೆ.
ಕಡಿಮೆ ರಕ್ತದೊತ್ತಡ ಅನುಭವಿಸಿದ ಕಾರಣ ವಿಚಾರಣೆ ಮಧ್ಯದಲ್ಲಿ ಮಲಗಬೇಕಾಯಿತು ಎಂದು ಆಕೆ ಹೇಳಿದರು.