alex Certify ಮನೆ ಕೆಲಸದಾಕೆಯ ನಗ್ನ ವಿಡಿಯೋ ಸೆರೆ ಹಿಡಿದವನಿಗೆ ವಿಧಿಸಲಾಗಿತ್ತು 23 ಕೋಟಿ ರೂ. ದಂಡ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಕೆಲಸದಾಕೆಯ ನಗ್ನ ವಿಡಿಯೋ ಸೆರೆ ಹಿಡಿದವನಿಗೆ ವಿಧಿಸಲಾಗಿತ್ತು 23 ಕೋಟಿ ರೂ. ದಂಡ….!

ನ್ಯೂಯಾರ್ಕ್ ನಲ್ಲಿ ವರದಿಯಾಗಿರುವ ಪ್ರಕರಣವೊಂದರಲ್ಲಿ ಶ್ರೀಮಂತನ ಮನೆಯಲ್ಲಿ ಆತನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಮಹಿಳೆಯ ನಗ್ನ ವಿಡಿಯೋಗಳನ್ನು ಅವಳಿಗೆ ಗೊತ್ತಾಗದಂತೆ ಕ್ಯಾಮಾರದಲ್ಲಿ ಸೆರೆಹಿಡಿಯುತ್ತಿದ್ದ ಮನೆಯ ಯಜಮಾನನಿಗೆ ಶಿಕ್ಷೆಯಾಗಿದ್ದು ಸಂತ್ರಸ್ತ ಮಹಿಳೆಗೆ $ 2.78 ಮಿಲಿಯನ್ ಪಾವತಿಸಲಾಗಿದೆ. ನ್ಯೂಯಾರ್ಕ್ ನಲ್ಲಿ 25 ವರ್ಷದ ಕೆಲ್ಲಿ ಆಂಡ್ರೇಡ್, ಮೈಕೆಲ್ ಎಸ್ಪೊಸಿಟೊ ಎಂಬ ಶ್ರೀಮಂತನ ಮನೆಯಲ್ಲಿ ಆತನ ನಾಲ್ಕು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು. ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಮನೆ ಯಜಮಾನನ ಕೃತ್ಯದ ರಹಸ್ಯವನ್ನು ಬಯಲು ಮಾಡಿದ ಕೆಲ್ಲಿ ಆಂಡ್ರೇಜ್ ಗೆ ಮ್ಯಾನ್ ಹ್ಯಾಟನ್ ನ ತೀರ್ಪುಗಾರರು $ 2.78 ಮಿಲಿಯನ್ ಪಾವತಿ ಮಾಡಿಸಿದ್ದಾರೆ.

ಕೆಲ್ಲಿ ಆಂಡ್ರೇಡ್ ಮಲಗುವ ಕೋಣೆಯಲ್ಲಿ ಹೊಗೆ ಡಿಟೆಕ್ಟರ್‌ನಲ್ಲಿ ಗುಪ್ತ ಕ್ಯಾಮೆರಾವನ್ನು 2021 ಆಕೆ ಕಂಡುಹಿಡಿದ ಬಳಿಕ ಅವಳು ಕೆಲಸ ಬಿಟ್ಟಿದ್ದಳು. ಇತ್ತೀಚಿಗೆ ಘಟನೆ ಸ್ಮರಿಸಿದ ಆಕೆ, ತಾನು ಮೈಕೆಲ್ ಎಸ್ಪೊಸಿಟೊ ಅವರ ಮನೆಯಲ್ಲಿದ್ದು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾಗ, ಎಸ್ಪೊಸಿಟೊ ಆಗಾಗ್ಗೆ ಸ್ಮೋಕ್ ಡಿಟೆಕ್ಟರ್ ಅನ್ನು ಬೇರೆ ಬೇರೆ ದಿಕ್ಕಿದೆ ಸರಿಹೊಂದಿಸುತ್ತಿರುವುದನ್ನು ಗಮನಿಸಿದೆ. ಆಗ ನನಗೆ ಅನುಮಾನಗಳು ಹುಟ್ಟಿಕೊಂಡವು. ಅದನ್ನು ಪರಿಶೀಲಿಸಿದಾಗ ನೂರಾರು ರೆಕಾರ್ಡಿಂಗ್‌ಗಳಿಂದ ತುಂಬಿದ ಮೆಮೊರಿ ಕಾರ್ಡ್ ಅನ್ನು ಒಳಗೊಂಡಿರುವ ಹಿಡನ್ ಕ್ಯಾಮೆರಾ ಕಾಣಿಸಿತು. ಇದನ್ನು ನೋಡಿ ಆಘಾತಗೊಂಡು ಪರಿಶೀಲಿಸಿದಾಗ, ಅವುಗಳಲ್ಲಿ ಹೆಚ್ಚಿನವು ನನ್ನ ನಗ್ನ ಅಥವಾ ನಾನು ಬಟ್ಟೆ ಧರಿಸುವಾಗ/ ಬಟ್ಟೆ ಕಳಚುವ ಸಮಯದಲ್ಲಿನ ಕ್ಷಣಗಳನ್ನು ಸೆರೆಹಿಡಿಯಲಾಗಿತ್ತು ಇದನ್ನು ತಿಳಿದ ತಕ್ಷಣ ನಾನು ನನ್ನ ಸುರಕ್ಷತೆಗೆ ಹೆದರಿ ತಪ್ಪಿಸಿಕೊಂಡೆ ಎಂದಿದ್ದಾರೆ.

ಅಕ್ರಮ ಕಣ್ಗಾವಲು ಅನುಮಾನದ ಮೇಲೆ ಎಸ್ಪೊಸಿಟೊವನ್ನು ಬಂಧಿಸಲಾಯಿತು. ಗರಿಷ್ಠ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಹೊಂದುವ ಕೃತ್ಯ ಇದಾಗಿತ್ತು. ಆದಾಗ್ಯೂ, ಎರಡು ವರ್ಷಗಳ ಪರೀಕ್ಷೆ ಮತ್ತು ಕೌನ್ಸೆಲಿಂಗ್‌ಗೆ ಒಪ್ಪಿಕೊಂಡ ನಂತರ ಅವರನ್ನು ಮುಕ್ತವಾಗಿ ಹೊರಹೋಗಲು ಅನುಮತಿಸಲಾಯಿತು. ಮ್ಯಾನ್‌ ಹ್ಯಾಟನ್‌ನ ತೀರ್ಪುಗಾರರು ಎಸ್ಪೊಸಿಟೊ ಮತ್ತು ಅವರ ಪತ್ನಿ ಡೇನಿಯಲ್ ವಿರುದ್ಧ ಭಾವನಾತ್ಮಕ ಯಾತನೆಯ ಹಾನಿಗಾಗಿ $780,000 ಮತ್ತು ಎಸ್ಪೊಸಿಟೊ ವಿರುದ್ಧ $2 ಮಿಲಿಯನ್ ದಂಡನಾತ್ಮಕ ಹಾನಿಯಾಗಿ ಕೆಲ್ಲಿ ಆಂಡ್ರೇನ್ ಗೆ ಪರಿಹಾರ ನೀಡಲಾಯಿತು.

ಈ ಆಘಾತಕಾರಿ ಅನುಭವವನ್ನು ಸಹಿಸಿಕೊಂಡ ನಂತರ ಕೆಲ್ಲಿ ಆಂಡ್ರೇನ್ ತನ್ನ ಪತಿಯೊಂದಿಗೆ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. ತನ್ನ ಕಥೆಯನ್ನು ಹಂಚಿಕೊಳ್ಳುವ ಮೂಲಕ, ಬೇರೆ ಯಾರೂ ಮೌನವಾಗಿ ನರಳದಂತೆ ಮತ್ತು ಅಪರಾಧಿಗಳನ್ನು ಅವರ ಕ್ರಿಯೆಗಳಿಗೆ ಹೊಣೆಗಾರರನ್ನಾಗಿ ಮಾಡುವಂತೆ ಒತ್ತಾಯಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...