ಅಯೋವಾ ವಿಶ್ವವಿದ್ಯಾಲಯದ ವಿರುದ್ಧ ನಡೆದ ಕಾಲೇಜು ಮಟ್ಟದ ಫುಟ್ಬಾಲ್ ಪಂದ್ಯದಲ್ಲಿ ಜೋಯಿ ಮಹೋವಿ ಎಂಬ ಸ್ಪರ್ಧಿಯು ಉದ್ದೇಶಪೂರ್ವಕವಾಗಿ ಅಲ್ಲದೇ ಇದ್ದರೂ ಸಹ ಅತ್ಯಾಕರ್ಷಕ ಗೋಲು ದಾಖಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಥ್ರೋ ಇನ್ ಸಂದರ್ಭದಲ್ಲಿ ಜೊಯಿ ಪಲ್ಟಿ ಹೊಡೆದಿದ್ದು ಅನಿರೀಕ್ಷಿತವಾಗಿ ಈ ಎಸೆತ ಗೋಲಿಗೆ ಹೋಗಿ ಬೀಳೋದ್ರಲ್ಲಿ ಯಶಸ್ವಿಯಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗ್ತಿದೆ.
ವಿಶ್ವವಿದ್ಯಾನಿಲಯದ ಅಧಿಕೃತ ಅಥ್ಲೆಟಿಕ್ಸ್ ತಂಡವು X ನಲ್ಲಿನ ಪೋಸ್ಟ್‌ನೊಂದಿಗೆ ಈ ವಿಶೇಷವಾದ ಗೋಲ್ನ್ನು ಸಂಭ್ರಮಿಸಿದೆ. ಮೊನ್ನೆ ನಡೆದ ಯುಎನ್ಐ ವಿರುದ್ಧ ಡ್ರೇಕ್ ವುಮನ್ ಸಾಕರ್ 2-1 ಅಂತರದಲ್ಲಿ ಗೆಲುವಿನ ನಗೆ ಬೀರಿದೆ. ಇದರಲ್ಲಿ ಜೋಯ್ ಮುಹೋನಿ ಅವರ ಥ್ರೋ ಇನ್ ಗೋಲ್ ನಂಬಲಸಾಧ್ಯ ಎಂಬಂತಿದೆ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ಫಿಫಾ ನಿಯಮಗಳ ಪ್ರಕಾರ, ಥ್ರೋ ಇನ್ನಿಂದ ನೇರವಾಗಿ ಗೋಲು ಗಳಿಸಲು ಸಾಧ್ಯವಾಗೋದಿಲ್ಲ. ಇಂತಹ ಸಂದರ್ಭಗಳಲ್ಲಿ ಹಾಲಿ ತಂಡಕ್ಕೆ ಶೂಟ್ ನೀಡಲಾಗುತ್ತದೆ. ಆದರೆ ಈ ಘಟನೆಯಲ್ಲಿ ಝೋಯ್ ಮಹೋನಿ ಗೋಲ್ನ್ನು ಪರಿಗಣಿಸಲಾಗಿದೆ. ಏಕೆಂದರೆ ಚೆಂಡು ಸರಿಯಾದ ರೀತಿಯಲ್ಲಿ ಗೋಲ್ ಮುಟ್ಟುವಲ್ಲಿ ಯಶಸ್ವಿಯಾಗಿತ್ತು.