ಶಿವಮೊಗ್ಗ: ಇಷ್ಟುದಿನ ರಾಜಧಾನಿ ಬೆಂಗಳೂರಿನಲ್ಲಿ ಸದ್ದು ಮಾಡುತ್ತಿದ್ದ ಮಾದಕ ವಸ್ತು, ಡ್ರಗ್ಸ್ ಜಾಲ ಇದೀಗ ಶಿವಮೊಗ್ಗ ಜಿಲ್ಲೆಗೂ ವ್ಯಾಪಿಸಿದ್ದು, ಗೃಹ ಸಚಿವರ ತವರು ಜಿಲ್ಲೆಯಲ್ಲಿಯೇ ಕಾಲೇಜು ವಿದ್ಯಾರ್ಥಿಗಳು ಗಂಜಾ ನಶೆಯಲ್ಲಿ ತೇಲಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ಗಾಂಜಾ ಸೇವಿಸಿದ ಮತ್ತಿನಲ್ಲಿ ಕಾಲೇಜಿನ ಕ್ಯಾಂಪಸ್ ನಲ್ಲೇ ಕೆಲವರು ತೂರಾಡಿದ್ದರೆ, ಇನ್ನು ಕೆಲ ವಿದ್ಯಾರ್ಥಿಗಳಿಗೆ ನಿಲ್ಲಲೂ ಸಾಧ್ಯವಾಗದೇ ಬಿದ್ದು ಹೊರಳಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಡ್ರಗ್ಸ್ ಪಿಡಿಗಿಗೆ ಸಿಲುಕಿ ನಶೆಯಲ್ಲಿ ತೂರಾಡುತ್ತಿರುವ ವಿದ್ಯಾರ್ಥಿಗಳ ದೃಶ್ಯ ಎಂಥವರನ್ನು ಅರೆ ಕ್ಷಣ ಆತಂಕಕ್ಕೀಡು ಮಾಡುತ್ತದೆ. ಇನ್ನಾದರೂ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಬಗ್ಗೆ ಅವರು ಸಾಗುತ್ತಿರುವ ಮಾರ್ಗಗಳ ಬಗ್ಗೆ ಗಮನ ಹರಿಸಬೇಕಿದೆ. ಇಂದಿನ ಮಕ್ಕಳೆ ನಾಳಿನ ದೇಶದ ಪ್ರಜೆಗಳು ಎಂಬ ಮಾತಿದೆ. ಆದರೆ ನಾಳಿನ ಪ್ರಜೆಗಳಾದ ವಿದ್ಯಾರ್ಥಿಗಳು ಈ ರೀತಿ ಮಾದಕ ವಸ್ತುಗಳ ದಾಸರಾದರೆ ದೇಶದ ಭವಿಷ್ಯದ ಗತಿಯೇನು?