
ಕಾಲೇಜು ವಿದ್ಯಾರ್ಥಿಗಳು ಚಾಲನೆ ಮಾಡುತ್ತಿದ್ದ ಮಾರುತಿ ಬ್ರೆಜ್ಜಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವೇಗವಾಗಿ ಚಲಿಸುತ್ತಿದ್ದ ಕಾರಿನಲ್ಲಿ ನಾಲ್ವರು ಕಾರ್ ನ ಕಿಟಕಿಯಲ್ಲಿ ನೇತಾಡುತ್ತಿದ್ದ ದೃಶ್ಯ ವೈರಲ್ ಆಗಿತ್ತು.
ಇಪ್ಪತ್ತಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಮೌಲ್ಯಮಾಪನ ಮಾಡಿದ ನಂತರ ಪೊಲೀಸರು ವಿದ್ಯಾರ್ಥಿಗಳನ್ನು ಗುರುತಿಸಿ ಬಂಧಿಸಿದ್ದಾರೆ.
ಕೌಶರ್ ರೆಹಮಾನ್, ಕೃಷ್ಣ ಅಂಕನ್, ತುಷಾರ್ ಸಿಂಗ್ ಮತ್ತು ಅಶುತೋಷ್ ಬಂಧಿತ ಆರೋಪಿಗಳು.