ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ಓಲಾ ಎಸ್ 1 ಸ್ಕೂಟರ್ ಯುವಜನರಲ್ಲಿ ಕ್ರೇಜ್ ಹೆಚ್ಚಿಸುತ್ತಿದೆ. ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆಯಾದ ಈ ವಾಹನ ಪಾಪ್ಯುಲಾರಿಟಿ ಗಳಿಸಿದೆ.
ಈ ಸ್ಕೂಟರ್‌ನ ಹೊಸ ಫೀಸರ್ ಟ್ರೆಂಡ್ ಸೃಷ್ಟಿಸಿದ್ದು, ಇದಕ್ಕೊಂದು ಉದಾಹರಣೆ ಎಂಬಂತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಲೇಜು ವಿದ್ಯಾರ್ಥಿಗಳು ಓಲಾ ಎಸ್1 ಪ್ರೊ ಹಾಡೊಂದಕ್ಕೆ ಖುಷಿಯಿಂದ ಸ್ಟೆಪ್ ಹಾಕುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದನ್ನು ಕಂಡ ಕಂಪನಿ ಸಿಇಒ ಭವಿಶ್ ಕೂಡ ಫಿದಾ ಆಗಿ ಟ್ವೀಟರ್‌ನಲ್ಲಿ ರೀಟ್ವೀಟ್ ಮಾಡಿದ್ದಾರೆ.
BIG NEWS: JDSಗೆ ಮತ್ತೊಂದು ಆಘಾತ…..? ಪಕ್ಷದ ವಾಟ್ಸಪ್ ಗ್ರೂಪ್ ನಿಂದ ಶಾಸಕ ಶಿವಲಿಂಗೇಗೌಡ ಎಕ್ಸಿಟ್
Ola S1 ಪ್ರೊ ಸ್ಕೂಟರ್‌ನಲ್ಲಿ ಮ್ಯೂಸಿಕ್ ಪ್ಲೇ ಮಾಡುವುದಕ್ಕಾಗಿ ವೈರ್‌ಲೆಸ್ ಬ್ಲೂಟೂತ್ ಅವಕಾಶ ನೀಡಲಾಗಿದೆ. ಸವಾರರು ಪ್ರಯಾಣದಲ್ಲಿರುವಾಗಲೂ ಸಹ ಸಂಗೀತವನ್ನು ಕೇಳಬಹುದು.
ಕಾಲೇಜು ತಂಡವೊಂದು ಓಲಾ ಸ್ಕೂಟರ್‌ನಲ್ಲಿ ಹಾಡು ಪ್ಲೇ ಮಾಡಿ ಸ್ಟೆಪ್ ಹಾಕಿರುವ ವಿಡಿಯೋ ಸಾವಿರಾರು ವೀಕ್ಷಣೆ ಕಂಡಿದೆ. ಈ ಫೀಚರ್ ವಿನ್ಯಾಸಗೊಳಿಸುವಾಗ ಈ ರೀತಿ ಬಳಕೆಯಾಗುತ್ತದೆಂದು ಯಾವತ್ತೂ ಯೋಚಿಸಿರಲಿಲ್ಲ ಎಂದು ಸಿಇಒ ಹಾಸ್ಯಮಯ ಪ್ರತಿಕ್ರಿಯೆ ನೀಡಿದ್ದಾರೆ.
ಓಲಾ ಇತ್ತೀಚೆಗೆ ತನ್ನ ಐವತ್ತು ಸಾವಿರ ವಾಹನಕ್ಕೆ ಮೂವ್ ಒಎಸ್2 ಅಪ್ಡೇಟ್ ಮಾಡಿದೆ. ಇದರಿಂದ ವಾಹನದ ಕಾರ್ಯಕ್ಷಮತೆ ಮತ್ತಷ್ಟು ಹೆಚ್ಚಿಸಿದೆ.