ಜನರಿಂದ ಹಣ ವಸೂಲಿಗೆ ಮುಂದಾಗಿದ್ದ ಪೊಲೀಸರನ್ನು ‘ಕಳ್ಳ ಕಳ್ಳ ಪೊಲೀಸ್ ಕಳ್ಳ’ ಎಂದು ಸಾರ್ವಜನಿಕರೇ ಪೊಲೀಸರನ್ನು ಅಟ್ಟಾಡಿಸಿಕೊಂಡು ಹೋದ ಘಟನೆ ಬೆಂಗಳೂರಿನಲ್ಲಿ ನಿನ್ನೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಹೊಯ್ಸಳ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಎ.ಎಸ್.ಐ ರಾಮಲಿಂಗಯ್ಯ, ಹೆಡ್ ಕಾನ್ಸ್ ಟೇಬಲ್ ಪ್ರಸನ್ನ ಎಂಬುವವರನ್ನು ಅಮಾನತು ಮಾಡಿ ನಗರ ಪೊಲೀಸ್ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ.
ಹೊಯ್ಸಳ ವಾಹನ ಪೊಲೀಸರು ಹಣ ವಸೂಲಿ ಮಾಡುತ್ತಿದ್ದಾರೆ. ಇವರು ಅಸಲಿ ಅಲ್ಲ ನಕಲಿ ಪೊಲೀಸರು ಎಂದು ಸಾರ್ವಜನಿಕರು ಮೊಬೈಲ್ ವಿಡಿಯೋ ಮಾಡುತ್ತಾ ಅಟ್ಟಿಸಿಕೊಂಡು ಹೋಗಿದ್ದಾರೆ.ಕಳ್ಳ ಕಳ್ಳ ಪೊಲೀಸ್ ಕಳ್ಳ ಎಂದು ಕೋಗುತ್ತಾ ಬರುವುದನ್ನು ಕಂಡ ಪೊಲೀಸರು ಹೊಯ್ಸಳ ವಾಹನದೊಂದಿಗೆ ಪರಾರಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬೇಲಿಯೇ ಎದ್ದು ಹೊಲ ಮೇಯ್ದಂತೆ
ಸಾರ್ವಜನಿಕ ಕಷ್ಟಗಳಿಗೆ ನೆರವಾಗುವ ಪೊಲೀಸರು ಜನರಿಂದಲೇ ಹಣ ಸುಲಿಗೆ ಮಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಹಲವು ಕಡೆ ಪೊಲೀಸರೇ ಜನರಿಂದ ಸುಲಿಗೆ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.