ಚಳಿಗಾಲ ಸ್ವಲ್ಪ ತಡವಾಗಿ ಶುರುವಾದ್ರು ಇಡೀ ಕರ್ನಾಟಕವನ್ನ ನಡುಗಿಸುತ್ತಿದೆ. ಡಿಸೆಂಬರ್ ಎರಡನೇ ವಾರದಿಂದ ಕರುನಾಡಿನ ತಾಪಮಾನ ಇಳಿಕೆಯಾಗುತ್ತಲೆ ಇದೆ. ಈಗಾಗ್ಲೇ ಉತ್ತರ ಕರ್ನಾಟಕದ ಭಾಗದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದ್ದು ಬೆಂಗಳೂರು ಹಾಗೂ ಇನ್ನುಳಿದ ಪ್ರದೇಶಗಳಲ್ಲೂ ಚಳಿ ಹೆಚ್ಚಿದೆ.
ಮನೆಯಲ್ಲೇ ತಯಾರಿಸಿ ಹರ್ಬಲ್ ಸೋಪ್
ಶುಕ್ರವಾರ ಮುಂಜಾನೆ ಬೆಂಗಳೂರಿನ ತಾಪಮಾನ 9.7 ಡಿಗ್ರಿಗೆ ಇಳಿಕೆಯಾಗಿತ್ತು. ಸಾಮಾನ್ಯವಾಗಿ ಇತ್ತೀಚೆಗೆ 15-20ರೊಳಗಿರುವ ಬೆಂಗಳೂರಿನ ತಾಪಮಾನ ಭಾರೀ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದ್ದು, ಬೆಂಗಳೂರಿಗರು ಚಳಿಗೆ ನಡುಗಿದ್ದಾರೆ.
ಈಗಾಗ್ಲೇ ಉತ್ತರ ಕರ್ನಾಟಕ ಭಾಗದ ಸಾಮಾನ್ಯ ತಾಪಮಾನ 10-15 ಕ್ಕೆ ಇಳಿಕೆಯಾಗಿದ್ದು ಇತ್ತೀಚೆಗೆ 8.5 ಡಿಗ್ರಿ ದಾಖಲಾಗಿ ಹಲವು ದಶಕಗಳ ದಾಖಲೆ ಮುರಿದಿತ್ತು.
ಬೀದರ್, ಕಲಬುರ್ಗಿ, ವಿಜಯಪುರ, ಧಾರವಾಡ, ಬೆಳಗಾವಿ, ಚಿತ್ರದುರ್ಗ, ದಕ್ಷಿಣಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಚಳಿ ಮತ್ತಷ್ಟು ಹೆಚ್ಚಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಉತ್ತರ ಹಾಗೂ ಪಶ್ಚಿಮ ಚಳಿಗಾಳಿಯ ಪ್ರಭಾವದಿಂದ ಭಾರತದ ದಕ್ಷಿಣ ಭಾಗದಲ್ಲೂ ಈ ಬಾರಿ ಚಳಿಯ ಪ್ರಮಾಣ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿ ಹೇಳಿದ್ದಾರೆ.