
ತ್ರಿಕೋನ ಪ್ರೇಮಕಥೆ…!
ಕರ್ನಾಟಕದಲ್ಲಿ ನಡೆದ ತ್ರಿಕೋನ ಪ್ರೇಮ ಕಥೆಯನ್ನು ಸೆಪ್ಟೆಂಬರ್ನಲ್ಲಿ ನಾಣ್ಯವನ್ನು ಟಾಸ್ ಮಾಡುವ ಮೂಲಕ ಪರಿಹರಿಸಲಾಗಿತ್ತು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದ ಪಂಚಾಯಿತಿ ಸಭೆಯಲ್ಲಿ ನಾಣ್ಯವನ್ನು ಟಾಸ್ ಮಾಡಿ ಸಮಸ್ಯೆ ಪರಿಹರಿಸಲಾಗಿತ್ತು. ಏಕಕಾಲದಲ್ಲಿ ಇಬ್ಬರು ಯುವತಿಯರನ್ನು ಯುವಕ ಪ್ರೀತಿಸಿದ್ದರಿಂದ ಈ ಸಮಸ್ಯೆ ಎದುರಾಗಿತ್ತು. ಕೊನೆಗೆ ಟಾಸ್ ಮೂಲಕ ಒಬ್ಬಳು ಯುವತಿಯನ್ನು ಮದುವೆಯಾಗಲು ಯುವಕ ಒಪ್ಪಿಗೆ ನೀಡಿದ್ದ. ಮತ್ತೊಬ್ಬಳು ಆತನ ಕೆನ್ನೆಗೆ ಬಾರಿಸಿ ಅಲ್ಲಿಂದ ಹೊರಟು ಹೋಗಿದ್ದಳು.
ವಧುವಿಗೆ ಸಿಂಧೂರ ಹಾಕಿದ ಮಾಜಿ ಪ್ರೇಮಿ
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಈ ವಿಲಕ್ಷಣ ಘಟನೆ ನಡೆದಿತ್ತು. ಮದುವೆ ಮಂಟಪದಲ್ಲಿದ್ದ ವಧು ಹಾಗೂ ವರ ಇನ್ನೇನು ಹೂಮಾಲೆ ಬದಲಾಯಿಸಬೇಕು ಅನ್ನೋವಷ್ಟರಲ್ಲಿ ಅಲ್ಲಿಗೆ ಏಕಾಏಕಿ ಎಂಟ್ರಿ ಕೊಟ್ಟ ಮಾಜಿ ಪ್ರೇಮಿ ವಧುವಿನ ಹಣೆ ಮೇಲೆ ಸಿಂಧೂರವನ್ನಿಟ್ಟಿದ್ದಾನೆ. ಇದರಿಂದ ಮದುವೆ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಬಳಿಕ ಕುಟುಂಬಸ್ಥರು ಪೊಲೀಸರನ್ನು ಕರೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ನಂತರ ನಿಶ್ಚಯವಾದ ವರನ ಜೊತೆಯೇ ಯುವತಿಯ ಮದುವೆಯನ್ನು ನೆರವೇರಿಸಲಾಯಿತು.
ವರನ ಸಹೋದರನ ಜೊತೆ ಮದುವೆ..!
ಜೂನ್ನಲ್ಲಿ ನಡೆದ ಮತ್ತೊಂದು ನಾಟಕೀಯ ವಿವಾಹದ ದೃಶ್ಯದಲ್ಲಿ, ವರನಿಗೆ ಈಗಾಗಲೇ ಮದುವೆಯಾಗಿದೆ ಎಂದು ಮಹಿಳೆಯೊಬ್ಬರು ಪಾಟ್ನಾದಲ್ಲಿ ನಡೆಯುತ್ತಿದ್ದ ಮದುವೆಯನ್ನು ಸ್ಥಗಿತಗೊಳಿಸಿದ್ರು. ನಂತರ ಈಗಾಗಲೇ ಹಸೆಮಣೆ ಮೇಲೆ ಕುಳಿತಿದ್ದ ವಧುವನ್ನು ಮದುವೆಯಾಗಬೇಕಿದ್ದ ವ್ಯಕ್ತಿಯ ಕಿರಿಯ ಸಹೋದರನ ಜೊತೆ ವಿವಾಹ ನೆರವೇರಿತು.
ಮದುವೆಯಲ್ಲಿ ಮಲಗಿದ ವರ..!
ಜೂನ್ 2021 ರಲ್ಲಿ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಇದರಲ್ಲಿ ವರ ತನ್ನ ವಧುವಿನ ಭುಜದ ಮೇಲೆ ಮಲಗಿದ್ದ. ಸ್ನೇಹಿತರು ವರನನ್ನು ಎಷ್ಟು ಎಬ್ಬಿಸಲು ಪ್ರಯತ್ನಪಟ್ಟರೂ ಕೂಡ ಆತ ಕುಂಭಕರ್ಣನಂತೆ ನಿದ್ರಿಸಿದ್ದು, ಎಚ್ಚರವೇ ಆಗಿಲ್ಲ. ಈ ವಿಡಿಯೋ ಭಾರಿ ವೈರಲ್ ಆಗಿತ್ತು. ಅಲ್ಲದೆ ವರ ಕುಡಿದಿರಬಹುದು ಅಂತಾ ನೆಟ್ಟಿಗರು ಊಹಿಸಿದ್ದಾರೆ.
ಜೆಸಿಬಿಯಿಂದ ಬಿದ್ದ ಜೋಡಿ…!
ಮದುವೆಯ ಮತ್ತೊಂದು ಉಲ್ಲಾಸದ ವೈರಲ್ ವಿಡಿಯೋದಲ್ಲಿ, ವಧು-ವರರು ಬುಲ್ಡೋಜರ್ನಿಂದ ಬೀಳುವ ಮೂಲಕ ಮದುವೆಯ ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನವೆಂಬರ್ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ವೈರಲ್ ಆಗಿತ್ತು.
ವಧು-ವರ ತಮ್ಮ ಮದುವೆಯ ಉಡುಪುಗಳನ್ನು ಧರಿಸಿ, ಜೆಸಿಬಿಯ ಅಗೆಯುವ ಯಂತ್ರದ ಮೇಲೆ ಕುಳಿತಿದ್ದರು. ಇದ್ದಕ್ಕಿದ್ದಂತೆ ಅಗೆಯುವ ಯಂತ್ರವು ಸ್ವಲ್ಪ ಬಾಗಿದ ಪರಿಣಾಮ ವಧು-ವರ ಇಬ್ಬರು ಕೆಳಗಿದ್ದ ಮೇಜಿನ ಮೇಲೆ ಧೊಪ್ಪನೆ ಬಿದ್ದಿದ್ದಾರೆ. ಇವರು ಬಿದ್ದ ರಭಸಕ್ಕೆ ಮೇಜು ತುಂಡಾಗಿತ್ತು. ಬಂದಿದ್ದಂತಹ ಅತಿಥಿಗಳು ಗಾಬರಿಯಿಂದ ತಲೆ ಮೇಲೆ ಕೈ ಹೊತ್ತು ನಿಂತಿದ್ದ ದೃಶ್ಯ ವೈರಲ್ ಆಗಿತ್ತು.