alex Certify ಮಕ್ಕಳ ಕೈಗೆ ಕಾಯಿನ್ ಕೊಡಬೇಡಿ: ಗಂಟಲಲ್ಲಿ ನಾಣ್ಯ ಸಿಲುಕಿದ್ದ ಮಗು ಅಪಾಯದಿಂದ ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಕೈಗೆ ಕಾಯಿನ್ ಕೊಡಬೇಡಿ: ಗಂಟಲಲ್ಲಿ ನಾಣ್ಯ ಸಿಲುಕಿದ್ದ ಮಗು ಅಪಾಯದಿಂದ ಪಾರು

ಯಾದಗಿರಿ: ಯಾದಗಿರಿಯ ಕೋಲಿವಾಡ ಬಡಾವಣೆಯ ಮೂರು ವರ್ಷದ ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ನಾಣ್ಯವನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಐದು ರೂಪಾಯಿ ಕಾಯಿನ್ ಕೈಯಲ್ಲಿ ಹಿಡಿದುಕೊಂಡು ಆಟವಾಡುತ್ತಿದ್ದ 3 ವರ್ಷದ ಮಗು ಭರತ್ ಅದನ್ನು ಬಾಯಲ್ಲಿ ಹಾಕಿಕೊಂಡಿದೆ. ಪೋಷಕರು ಇದನ್ನು ಗಮನಿಸಿರಲಿಲ್ಲ. ಮಗುವಿನ ಉಸಿರಾಟದಲ್ಲಿ ಏರುಪೇರಾಗಿದ್ದು ಪೋಷಕರು ಗಮನಿಸಿದಾಗ ಗಂಟಲಲ್ಲಿ ನಾಣ್ಯ ಇರುವುದು ಗೊತ್ತಾಗಿದೆ.

ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಎಕ್ಸ್ ರೇ ಮಾಡಿದಾಗ ನಾಣ್ಯ ಗಂಟಲಲ್ಲಿ ಸಿಲುಕಿರುವುದು ಗೊತ್ತಾಗಿದೆ. ನಂತರ ವೈದ್ಯರು ನಾಣ್ಯ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಗು ಅಪಾಯದಿಂದ ಪಾರಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...