ನವದೆಹಲಿ: ಹೆಲ್ತ್ ಕೇರ್ ಇನ್ಸೂರೆನ್ಸ್ ಸಾಫ್ಟ್ ವೇರ್ ಗೆ ಸಂಬಂಧಿಸಿದ ಮಾಹಿತಿ ಮತ್ತು ವ್ಯಾಪಾರ ರಹಸ್ಯಗಳನ್ನು ಇನ್ಫೋಸಿಸ್ ಕಂಪನಿ ಕಳವು ಮಾಡಿದೆ ಎಂದು ಐಟಿ ಕಂಪನಿ ಕಾಗ್ನಿಜೆಂಟ್ ಅಂಗಸಂಸ್ಥೆ ಟ್ರೈಝೆಟ್ಟೋ ಆರೋಪಿಸಿದೆ. ಈ ಕುರಿತಾಗಿ ಅಮೆರಿಕದ ಫೆಡರಲ್ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಆದರೆ, ಈ ಆರೋಪವನ್ನು ಇನ್ಫೋಸಿಸ್ ನಿರಾಕರಿಸಿದ್ದು, ನ್ಯಾಯಾಲಯದಲ್ಲಿ ದಾಖಲಾದ ಮೊಕದ್ದಮೆ ಬಗ್ಗೆ ಮಾಹಿತಿ ಇದ್ದು, ಇದಕ್ಕೆ ನ್ಯಾಯಾಲಯದಲ್ಲಿ ಸೂಕ್ತ ಸಮರ್ಥನೆ ನೀಡುವುದಾಗಿ ಹೇಳಿದೆ. ಟ್ರೈಝೆಟ್ಟೊ ಕಂಪನಿ ಆರೋಗ್ಯ ವಿಮೆದಾರರಿಗೆ ಸೌಲಭ್ಯ ಒದಗಿಸಲು ಕ್ಯೂ.ಎನ್.ಎಕ್ಸ್.ಟಿ., ಫೆಸೆಕ್ಟ್ಸ್ ಸಾಫ್ಟ್ ವೇರ್ ಬಳಸುತ್ತಿದ್ದು, ಅಕ್ರಮವಾಗಿ ಸಾಫ್ಟ್ವೇರ್ ದತ್ತಾಂಶವನ್ನು ಇನ್ಫೋಸಿಸ್ ಕಳವು ಮಾಡಿದೆ. ತನ್ನದೇ ಆದ ಸಾಫ್ಟ್ವೇರ್ ಅಭಿವೃದ್ಧಿಪಡಿಸಲು ಈ ದತ್ತಾಂಶ ಬಳಸಿಕೊಂಡಿದ್ದು, ವ್ಯಾಪಾರ ರಹಸ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆ ಇದಾಗಿದೆ ಎಂದು ಟೆಕ್ಸಾಸ್ ಕೋರ್ಟ್ ನಲ್ಲಿ ಕಾಗ್ನಿಜೆಂಟ್ ಮೊಕದ್ದಮೆ ದಾಖಲಿಸಿದೆ.