![](https://kannadadunia.com/wp-content/uploads/2020/11/4608b924-eaca-4e6f-9f7f-94ed54791432.jpg)
ಕಾಫಿ ಕುಡಿಯುವುದರಿಂದ ಶೀತ, ತಲೆ ನೋವಿನಂಥ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು ಎಂಬುದು ನಿಮಗೆಲ್ಲಾ ತಿಳಿದಿರುವ ಸಂಗತಿ. ಆದರೆ ಇದರಿಂದ ತಯಾರಿಸಲಾದ ಫೇಸ್ ಪ್ಯಾಕ್ ಅತ್ಯುತ್ತಮ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತೇ?
ಇದು ತ್ವಚೆಯ ಕಾಂತಿಯನ್ನು ಮರಳಿ ಕೊಡುತ್ತದೆ. ಕಪ್ಪು ಕಲೆಗಳನ್ನು ತೆಗೆದು ಹಾಕುತ್ತದೆ. ಮಧ್ಯವಯಸ್ಕ ಮಹಿಳೆಯರಲ್ಲಿ ಕಂಡು ಬರುವ ಮುಖದ ತೂತುಗಳನ್ನು ಕಡಿಮೆ ಮಾಡಿ ಹೊಳಪನ್ನು ತಂದುಕೊಡುತ್ತದೆ.
ಸುಕ್ಕು ಮತ್ತು ಮುಖದ ಮೇಲಿನ ಅನಗತ್ಯ ಗೆರೆಗಳನ್ನು ದೂರ ಮಾಡುತ್ತದೆ. ಇದರಿಂದ ಫೇಸ್ ಸ್ಕ್ರಬ್ ಮಾತ್ರವಲ್ಲ ಬಾಡಿ ಸ್ಕ್ರಬ್ ಕೂಡಾ ಮಾಡಿಕೊಳ್ಳಬಹುದು.
ಕಾಫಿ ಮಾಸ್ಕ್ ಸರಳವಾಗಿ ಹೀಗೆ ಮಾಡಿಕೊಳ್ಳಬಹುದು. ತಟ್ಟೆಗೆ ಎರಡು ಚಮಚ ಕಾಫಿ ಪುಡಿ, ಒಂದು ಚಮಚ ಜೇನುತುಪ್ಪ, ನಿಂಬೆರಸ ಮತ್ತು ಬಾದಾಮಿ ಎಣ್ಣೆಯನ್ನು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ, ಸ್ಕ್ರಬ್ ಮಾಡಿ. ಅರ್ಧ ಗಂಟೆ ಬಳಿಕ ತೊಳೆಯಿರಿ. ಇದರಿಂದ ನಿಮ್ಮ ಮುಖ ಸ್ವಚ್ಛವಾಗುವುದು ಮಾತ್ರವಲ್ಲ, ಮೊಡವೆ ಕಲೆಯಂಥ ಸಮಸ್ಯೆಗಳು ಬಹುಬೇಗ ದೂರವಾಗುತ್ತದೆ. ಅತ್ಯುತ್ತಮ ಫಲಿತಾಂಶಕ್ಕೆ ಇದನ್ನು ವಾರಕ್ಕೆರಡು ಬಾರಿ ಪ್ರಯತ್ನಿಸಬಹುದು.