ಚಳಿಗಾಲದಲ್ಲಿ ಮನಸ್ಸನ್ನು ತಾಜಾ ಹಾಗೂ ಮೈ ಬೆಚ್ಚಗಿಡುವ ಕೆಲಸವನ್ನು ಕಾಫಿ ಮಾಡುತ್ತೆ. ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಕಾಫಿ ಬೇಕು. ಕಾಫಿ ಆರೋಗ್ಯಕ್ಕೆ ಒಳ್ಳೆಯದೆಂದು ಸಾಬೀತಾಗಿದೆ. ಹಾಗೆ ಕಾಫಿ ಚರ್ಮದ ಕಾಂತಿ ಹೆಚ್ಚಿಸಲೂ ಸಹಕಾರಿ.
ಕಾಫಿ ಜೊತೆ ಜೇನು ತುಪ್ಪವನ್ನು ಬೆರೆಸಿ ಸ್ಕ್ರಬ್ ರೂಪದಲ್ಲಿ ಬಳಸುವುದ್ರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಇದು ಚರ್ಮ ಶುಷ್ಕವಾಗುವುದನ್ನು ತಪ್ಪಿಸುತ್ತದೆ.
ಬಿಳಿ ಹಾಗೂ ಶುಷ್ಕ ಕೂದಲು ಸಮಸ್ಯೆಯನ್ನು ಕಾಫಿ ಬಗೆಹರಿಸುತ್ತದೆ. ಕಾಫಿಯನ್ನು ಬಳಸುವುದ್ರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಮೆಹಂದಿಗೆ ಕಾಫಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿಕೊಳ್ಳಬೇಕು. ಕೂದಲು ಉದುರುವುದು ಕಡಿಮೆಯಾಗಿ ಕೂದಲು ಹೊಳಪು ಪಡೆಯುತ್ತದೆ.
ಕಾಫಿ ಪುಡಿ ಜೊತೆ ಟಿ-ಟ್ರೀ ಪುಡಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದ್ರಿಂದ ಚರ್ಮ ವಯಸ್ಸಾದಂತೆ ಕಾಣುವುದಿಲ್ಲ.
ಕಾಫಿಯನ್ನು ಮುಖಕ್ಕೆ ಮಸಾಜ್ ಮಾಡಿದಲ್ಲಿ ಕೂದಲಿನ ಸಮಸ್ಯೆ ಕಡಿಮೆಯಾಗಿ, ಮುಖ ಎಣ್ಣೆಯುಕ್ತವಾಗುವುದು ತಪ್ಪುತ್ತದೆ.
ಕಣ್ಣಿನ ಸುತ್ತ ಕಾಣುವ ಕಪ್ಪು ಕಲೆಯನ್ನು ಕಾಫಿ ತೊಡೆದು ಹಾಕುತ್ತದೆ. ಜೊತೆಗೆ ಕಣ್ಣಿನ ಉರಿಯೂ ಕಡಿಮೆಯಾಗುತ್ತದೆ.
ಮುಖಕ್ಕೆ ಕಾಫಿ ಪೇಸ್ಟ್ ಹಚ್ಚಿಕೊಂಡಲ್ಲಿ ಮುಖ ಹೊಳಪು ಪಡೆಯುತ್ತದೆ.