alex Certify ಬಿಳಿ ಕೂದಲ ಸಮಸ್ಯೆಗೆ ಕಾಫಿಯಿಂದ ಶಾಶ್ವತ ಪರಿಹಾರ; ಅಡ್ಡ ಪರಿಣಾಮವಿಲ್ಲದ ಮದ್ದು ಇದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಳಿ ಕೂದಲ ಸಮಸ್ಯೆಗೆ ಕಾಫಿಯಿಂದ ಶಾಶ್ವತ ಪರಿಹಾರ; ಅಡ್ಡ ಪರಿಣಾಮವಿಲ್ಲದ ಮದ್ದು ಇದು

ಬಿಳಿ ಕೂದಲ ಸಮಸ್ಯೆ ಈಗ ಬಹುತೇಕ ಎಲ್ಲರಲ್ಲೂ ಇದೆ. ಕೆಲವರಿಗಂತೂ ವಯಸ್ಸಿಗೆ ಮೊದಲೇ ಕೂದಲು ಬೆಳ್ಳಗಾಗುತ್ತದೆ. ಮಕ್ಕಳು ಕೂಡ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬದಲಾಗುತ್ತಿರುವ ಜೀವನ ಶೈಲಿ ಇದಕ್ಕೆ ಪ್ರಮುಖ ಕಾರಣ. ಜೊತೆಗೆ ಪೋಷಕಾಂಶಗಳ ಕೊರತೆಯಿಂದ್ಲೂ ಕೂದಲು ಬೇಗನೆ ಬೆಳ್ಳಲಾಗುತ್ತದೆ.

ಬಿಳಿ ಕೂದಲನ್ನು ಕಲರ್‌ ಮಾಡಲು ಮಾರುಕಟ್ಟೆಯಲ್ಲಿ ನಾನಾ ಬಗೆಯ ಪ್ರಾಡಕ್ಟ್‌ಗಳು ಲಭ್ಯವಿವೆ. ಆದರೆ ಕೆಲವರು ತಮ್ಮ ಕೂದಲನ್ನು ನೈಸರ್ಗಿಕವಾಗಿಯೇ ಕಪ್ಪಾಗಿಸಲು ಬಯಸುತ್ತಾರೆ. ಅವರಿಗೆ ಕಾಫಿ ತುಂಬಾ ಪ್ರಯೋಜನಕಾರಿಯಾಗಬಲ್ಲದು. ಕೂದಲು ಬಿಳಿ ಬಣ್ಣಕ್ಕೆ ತಿರುಗಿದ್ದರೆ ಅಂಥವರೆಲ್ಲ ಕಾಫಿಯನ್ನು ಟ್ರೈ ಮಾಡಬಹುದು.

ಕಾಫಿ ಪುಡಿಗೆ ಸ್ವಲ್ಪ ನೀರನ್ನು ಮಿಶ್ರಣ ಮಾಡಿ. ಅದನ್ನು ಚೆನ್ನಾಗಿ ಕೂದಲಿಗೆ ಹಚ್ಚಿಕೊಳ್ಳಿ. ಅರ್ಧಗಂಟೆ ಹಾಗೇ ಬಿಡಿ. ನಂತರ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ಈ ಕಾಫಿ ಪೇಸ್ಟ್‌ ಅನ್ನು 15 ದಿನಗಳವರೆಗೆ ಪ್ರತಿದಿನವೂ ಕೂದಲಿಗೆ ಹಚ್ಚಬೇಕು. ಈ ರೀತಿ ಮಾಡುವುದರಿಂದ ವಯಸ್ಸಿಗೇ ಮೊದಲೇ ನಿಮ್ಮ ಕೂದಲು ಬೆಳ್ಳಗಾಗಿದ್ದರೆ ಮತ್ತೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...