ಬೆಂಗಳೂರು: ಕಾರಿನಲ್ಲಿ ಬಂದು ಎಳನೀರು ಕಳ್ಳತನ ಮಾಡುತ್ತಿದ್ದ ಖರ್ತರ್ನಾಕ್ ಆರೋಪಿಯನ್ನು ಬೆಂಗಳೂರಿನ ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೋಹನ್ ಬಂಧಿತ ಆರೋಪಿ. ಕಳೆದ ಮೂರು ತಿಂಗಳಿಂದ ಬೆಂಗಳೂರಿನಲ್ಲಿ ವಿವಿಧೆಡೆಗಳಲ್ಲಿ ಮೋಹನ್ ಎಳನೀರು ಕದಿಯುವುದನ್ನೇ ಕಾಯಕ ಮಾಡಿಕೊಂಡಿದ್ದ.
ಎಳನೀರು ವ್ಯಾಪಾರಿ ರಾಜಣ್ಣ ಎಂಬುವವರು 12 ಸಾವಿರ ಎಳನೀರನ್ನು ತಂದಿದ್ದರು. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಎಳನೀರು ಕಳ್ಳತನವಾಗಿತ್ತು. ಈ ಹಿನ್ನೆಲೆಯಲ್ಲಿ ಗಿರಿನಗರ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿ ಮೋಹನ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಮೋಹನ್, ತಾನು ಈ ಹಿಂದೆ ಎಳನೀರು ವ್ಯಾಪಾರಿಯಾಗಿದ್ದೆ. ಬಿಡುವಿನ ವೇಳೆ ರಮ್ಮಿ ಆಡಿ ಲಕ್ಷ ಲಕ್ಷ ರೂಪಾಯಿ ಕಳೆದುಕೊಂಡು ಸಾಲಗಾರನಾಗಿದ್ದೆ. ಸಾಲ ತೀರಿಸಲು ಕಾರು ಬಾಡಿಗೆ ಪಡೆದು ಟ್ಯಾಕ್ಸಿ ಓಡಿಸಲು ಆರಂಭಿಸಿದೆ. ಹೀಗೆ ಒಂದು ದಿನ ಎಳನೀರು ಕಣ್ಣಿಗೆ ಬಿತ್ತು. ಎಳನೀರು ಕಳ್ಳತನ ಮಾಡಲು ಪ್ಲ್ಯಾನ್ ಮಾಡಿದೆ. ರಾತ್ರಿ ಕದ್ದ ಎಳನೀರನ್ನು ಹಗಲಲ್ಲಿ ಮಾರಾಟ ಮಡುತ್ತಿದ್ದೆ ಎಂದು ಬಾಯ್ಬಿಟ್ಟಿದ್ದಾನೆ. ಆರೋಪಿಯಿಂದ ಕಳ್ಳತನಕ್ಕೆ ಬಳಿಸಿದ್ದ ಕಾರು, ರಾಯಲ್ ಎನ್ ಪೀಲ್ಡ್ ಸೇರಿದಂತೆ 8 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.