ಚಳಿಗಾಲದಲ್ಲಿ ಮೈ ಒಡಕು, ತುರಿಕೆ, ಚರ್ಮದ ಸಮಸ್ಯೆ ಸಾಮಾನ್ಯ. ಚಳಿಯ ಈ ಸಂದರ್ಭದಲ್ಲಿ ಆರೋಗ್ಯವನ್ನೊಂದೇ ಅಲ್ಲ ತ್ವಚೆಯ ವಿಶೇಷ ಆರೈಕೆ ಮಾಡಿಕೊಳ್ಳಬೇಕು.
ಕೆಲವರು ಚಳಿಯಿಂದ ರಕ್ಷಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಚರ್ಮದ ಬಗ್ಗೆ ಮಾತ್ರ ಗಮನ ನೀಡುವುದಿಲ್ಲ. ಇದ್ರಿಂದ ಚರ್ಮ ಬಿರುಕುಬಿಟ್ಟು ರಕ್ತ ಬರಲು ಶುರುವಾಗುತ್ತದೆ.
ಒಡಕು ಚರ್ಮದವರು ಚಳಿಗಾಲದಲ್ಲಿ ಕೆಲವೊಂದು ಉಪಾಯಗಳನ್ನು ತಪ್ಪದೆ ಪಾಲಿಸಬೇಕಾಗುತ್ತದೆ.
ರಾತ್ರಿ ಮಲಗುವ ಮೊದಲು ತುಟಿಗಳಿಗೆ ತೆಂಗಿನ ಎಣ್ಣೆಯನ್ನು ಅವಶ್ಯಕವಾಗಿ ಹಚ್ಚಿಕೊಳ್ಳಿ. ಬೆಳಿಗ್ಗೆಯಷ್ಟರಲ್ಲಿ ನಿಮ್ಮ ತುಟಿಗಳು ಕೋಮಲವಾಗುತ್ತವೆ. ದಿನದಲ್ಲಿ ಕೂಡ ನೀವು ಲಿಪ್ ಬಾಮ್ ಬದಲು ತೆಂಗಿನ ಎಣ್ಣೆಯನ್ನು ಉಪಯೋಗಿಸಬಹುದು.
ತೆಂಗಿನ ಎಣ್ಣೆ ಮೇಕಪ್ ತೆಗೆಯಲು ಬಹಳ ಒಳ್ಳೆಯದು. ಸರಳ ಹಾಗೂ ಸುಲಭವಾಗಿ ಮೇಕಪ್ ತೆಗೆಯಲು ಇದು ನೆರವಾಗುತ್ತದೆ. ಮುಖಕ್ಕೆ ಅಂಟಿಕೊಂಡಿರುವ ರಾಸಾಯನಿಕವನ್ನು ಕ್ಲೀನ್ ಮಾಡಿ ಚರ್ಮ ಹೊಳೆಯುವಂತೆ ಮಾಡುತ್ತದೆ.
ಚಳಿಗಾಲದಲ್ಲಿ ನಿಮ್ಮ ಚರ್ಮ ಕೂಡ ಶುಷ್ಕವಾಗಿದ್ದು, ಮನೆಯಿಂದ ಹೊರಗೆ ಹೋಗಲು ಮುಜುಗುರವಾಗುತ್ತಿದ್ದರೆ ತೆಂಗಿನ ಎಣ್ಣೆಯನ್ನು ಬಳಸಿ. ಮನೆಯಿಂದ ಹೊರಗೆ ಹೋಗುವ ಮೊದಲು ತೆಂಗಿನ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ಚರ್ಮದ ಶುಷ್ಕತೆಯನ್ನು ಹೋಗಲಾಗಿಸುತ್ತದೆ.
ತೆಂಗಿನ ಎಣ್ಣೆಯನ್ನು ನಿಂಬೆ ರಸದ ಜೊತೆ ಬೆರೆಸಿ ಮುಖಕ್ಕೆ ಹಚ್ಚುವುದ್ರಿಂದ ಮುಖದ ಮೇಲಿನ ಕಪ್ಪು ಕಲೆ ದೂರವಾಗುತ್ತದೆ. ತೆಂಗಿನ ಎಣ್ಣೆ ನಿಂಬೆ ರಸ ಬೆರೆಸಿ ಮೊಣಕೈ, ಮೊಣಕಾಲಿಗೆ ಹಚ್ಚಿಕೊಳ್ಳುವುದ್ರಿಂದ ಕಪ್ಪು ಕಲೆ ದೂರವಾಗುತ್ತದೆ.
ತೆಂಗಿನ ಎಣ್ಣೆಯನ್ನು ತಲೆ ಕೂದಲಿಗೆ ಹಚ್ಚಿಕೊಳ್ಳುವುದ್ರಿಂದ ಕೂದಲು ಮೃದುವಾಗಿ ಕಪ್ಪಗಾಗಿ ಉದುರುವುದು ನಿಲ್ಲುತ್ತದೆ. ತೆಂಗಿನ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಕೂದಲಿಗೆ ಹಚ್ಚಿಕೊಳ್ಳಬೇಕು. ನಂತ್ರ ಪ್ಲಾಸ್ಟಿಕ್ ಕವರನ್ನು ತಲೆಗೆ ಮುಚ್ಚಿ ಸ್ವಲ್ಪ ಸಮಯ ಬಿಟ್ಟು ತಲೆ ಸ್ನಾನ ಮಾಡಬೇಕು.