ಮುಖದ ಸೌಂದರ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಬ್ಬರ ಚರ್ಮ ಭಿನ್ನವಾಗಿರುತ್ತದೆ. ಚರ್ಮಕ್ಕೆ ತಕ್ಕಂತೆ ಸೌಂದರ್ಯ ವರ್ದಕಗಳನ್ನು ಬಳಸಬೇಕಾಗುತ್ತದೆ. ಮುಖದ ಸೌಂದರ್ಯ ವೃದ್ಧಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ವಸ್ತುಗಳಿವೆ. ಆದ್ರೆ ಅವು ಚರ್ಮದ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆಯಿದೆ. ಮುಖದ ಸೌಂದರ್ಯ ಹೆಚ್ಚಿಸಲು ತೆಂಗಿನ ಎಣ್ಣೆ ಪ್ರಯೋಜನಕಾರಿ.
ತೆಂಗಿನ ಎಣ್ಣೆ ಪೌಷ್ಠಿಕಾಂಶ ಮತ್ತು ಆಂಟಿ-ಆಕ್ಸಿಡೆಂಟ್ ಗುಣಗಳಿಂದ ಕೂಡಿದೆ. ಇದು ಆರೋಗ್ಯದ ಜೊತೆ ಚರ್ಮಕ್ಕೆ ಪ್ರಯೋಜನಕಾರಿ. ಆಯಿಲ್ ಸ್ಕಿನ್ ಹೊಂದಿರುವವರು ತೆಂಗಿನ ಎಣ್ಣೆ ಪ್ಯಾಕ್ ಮುಖಕ್ಕೆ ಹೆಚ್ಚಿಕೊಂಡು ಚರ್ಮವನ್ನು ಕಾಂತಿಗೊಳಿಸಬಹುದು.
ಇದಕ್ಕೆ ಬೇಕಾಗುವ ಸಾಮಗ್ರಿ : ವಸ್ತು
ತೆಂಗಿನ ಎಣ್ಣೆ – 1/2 ಚಮಚ
ನಿಂಬೆ ರಸ – 1/2 ಚಮಚ
ಮೊಸರು – 1/2 ಚಮಚ
ವಿಧಾನ : ಒಂದು ಬಟ್ಟಲಿನಲ್ಲಿ ಎಲ್ಲಾ ಮೂರು ಪದಾರ್ಥವನ್ನು ಮಿಕ್ಸ್ ಮಾಡಿ. ತಯಾರಿಸಿದ ಮಿಶ್ರಣವನ್ನು ಮುಖ ಮತ್ತು ಕತ್ತಿನ ಮೇಲೆ ಹಚ್ಚಿ ಮಸಾಜ್ ಮಾಡಿ. 20 ನಿಮಿಷ ಬಿಟ್ಟು ನಂತ್ರ ತಣ್ಣೀರಿನಲ್ಲಿ ಸ್ವಚ್ಛಗೊಳಿಸಿ. ಇದು ಮುಖದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ತೊಡೆದುಹಾಕುತ್ತದೆ. ಚರ್ಮವನ್ನು ಶುದ್ಧಗೊಳಿಸುತ್ತದೆ.