![](https://kannadadunia.com/wp-content/uploads/2021/10/coconut-milk-1296x728-header-1024x575.jpg)
ಕೂದಲು ಸುಂದರವಾಗಿದ್ದರೆ ಪ್ರತಿಯೊಬ್ಬರನ್ನು ಸೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆ. ಪಾರ್ಲರ್ ಗೆ ಹೋಗಿ ಕೂದಲಿನ ಸ್ಪಾ ಮಾಡುವುದು ಬಹಳ ದುಬಾರಿ. ಮನೆಯಲ್ಲೇ ಸುಲಭವಾಗಿ ಸ್ಪಾ ಮಾಡಿಕೊಂಡು ಕೂದಲಿನ ಸೌಂದರ್ಯ ಹೆಚ್ಚಿಸಬಹುದು. ಕೂದಲಿನ ಸೌಂದರ್ಯಕ್ಕೆ ತೆಂಗಿನ ಹಾಲು ಒಳ್ಳೆಯ ಮದ್ದು.
ತೆಂಗಿನ ಹಾಲಿನ ಸಹಾಯದಿಂದ ಮನೆಯಲ್ಲಿಯೇ ನೈಸರ್ಗಿಕ ಹೇರ್ ಸ್ಪಾ ತೆಗೆದುಕೊಳ್ಳಬಹುದು. ತೆಂಗಿನ ಕಾಯಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿ, ಮಿಕ್ಸಿಗೆ ಹಾಕಿ ರುಬ್ಬಬೇಕು. ಅದಕ್ಕೆ ಒಂದು ಕಪ್ ನೀರು ಸೇರಿಸಿ ಚೆನ್ನಾಗಿ ಪೇಸ್ಟ್ ಮಾಡಿ. ಅದನ್ನು ಕಾಟನ್ ಬಟ್ಟೆಯಲ್ಲಿ ಹಾಕಿ, ಜರಡಿ ಹಿಡಿಯಬೇಕು.
ಆ ಹಾಲನ್ನು ಹೇರ್ ಕಲರ್ ಬ್ರಶ್ ಮೂಲಕ ನೆತ್ತಿಯ ಮೇಲೆ ಚೆನ್ನಾಗಿ ಹಚ್ಚಬೇಕು. ತೆಂಗಿನ ಹಾಲಿಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಬಹುದು. ಕೂದಲು ಉದ್ದವಾಗಿ ಬೆಳೆಬೇಕೆಂದ್ರೆ ಇದನ್ನು ಹಚ್ಚಬೇಕು. ತೆಂಗಿನ ಹಾಲನ್ನು ಬೇರುಗಳಿಂದ ಕೂದಲಿನ ತುದಿಯವರೆಗೆ ಹಚ್ಚಿ, ಐದು ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಬಿಸಿ ನೀರಿನಲ್ಲಿ ಟವೆಲ್ ಅದ್ದಿ, ಹಿಂಡಿ ಅದನ್ನು ತಲೆ ಮೇಲೆ ಹಾಕಿಕೊಳ್ಳಬೇಕು. ನಾಲ್ಕೈದು ಬಾರಿ ಹೀಗೆ ಮಾಡಬೇಕು. ಒಂದು ಗಂಟೆ ನಂತ್ರ ಕೂದಲನ್ನು ಸ್ವಚ್ಛ ನೀರಿನಲ್ಲಿ ತೊಳೆಯಬೇಕು. ಇದರಿಂದ ಕೂದಲು ಬಲಗೊಳ್ಳುತ್ತದೆ. ಕೂದಲಿನ ಬೆಳವಣಿಗೆ ವೇಗವಾಗುತ್ತದೆ. ತಲೆಹೊಟ್ಟು ಕಡಿಮೆಯಾಗುತ್ತದೆ.