
ಸಾತ್ವಿಕ ಆಚರಣೆ, ಸಾತ್ವಿಕ ಪೂಜೆ, ಧಾರ್ಮಿಕ ಕಾರ್ಯ ಸೇರಿದಂತೆ ಎಲ್ಲ ಮಂಗಳ ಕಾರ್ಯದಲ್ಲಿ ತೆಂಗಿನಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ತೆಂಗಿನ ಕಾಯಿ ಪೂಜೆಗೆ ಮಾತ್ರವಲ್ಲ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುವ ಶಕ್ತಿ ಹೊಂದಿದೆ. ವಿವಿಧ ವಿಧಾನಗಳ ಮೂಲಕ ನಮ್ಮ ಜೀವನದ ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.
ಒಂದು ತೆಂಗಿನ ಕಾಯಿ ಮೇಲೆ ಕುಂಕುಮದಿಂದ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಿ, ಹನುಮಂತನ ದೇವಸ್ಥಾನದಲ್ಲಿ ಅರ್ಪಿಸಿ. ತಕ್ಷಣ ಫಲ ಪ್ರಾಪ್ತಿಯಾಗಲಿದೆ.
ಜಾತಕದಲ್ಲಿ ಶನಿ, ರಾಹು, ಕೇತು ದೋಷವಿದ್ದರೆ ಒಣಗಿದ ತೆಂಗಿನ ಕಾಯಿಯನ್ನು ತೆಗೆದುಕೊಳ್ಳಿ. ಬಾಯಿ ಆಕಾರದಲ್ಲಿ ಅದನ್ನು ಕಟ್ ಮಾಡಿ. ಅದರೊಳಗೆ ಐದು ವಿಧ ಒಣಗಿದ ಹಣ್ಣುಗಳು ಹಾಗೂ ಐದು ಸಕ್ಕರೆ ಅಚ್ಚನ್ನು ಹಾಕಿ ತೆಂಗಿನ ಕಾಯಿಯ ಬಾಯಿಯನ್ನು ಮುಚ್ಚಿ. ನಂತ್ರ ಅಶ್ವತ್ಥ ಮರದ ಕೆಳಗೆ ಮಣ್ಣನ್ನು ಅಗೆದು ಅಲ್ಲಿ ಇದನ್ನು ಮುಚ್ಚಿ. ಬರುವಾಗ ಅದನ್ನು ತಿರುಗಿ ನೋಡಬೇಡಿ.
ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಕಾಡ್ತಾ ಇದ್ದಲ್ಲಿ ಶುಕ್ರವಾರ ದೇವಿ ಲಕ್ಷ್ಮಿ ಮಂದಿರಕ್ಕೆ ಹೋಗಿ ಜುಟ್ಟವಿರುವ ತೆಂಗಿನಕಾಯಿ, ಗುಲಾಬಿ, ಕಮಲದ ಹೂವಿನ ಮಾಲೆ, ಬಿಳಿ ಬಟ್ಟೆ, ಮೊಸರನ್ನು ಅರ್ಪಿಸಿ. ದೇವಿಗೆ ಕರ್ಪೂರದ ಆರತಿ ಎತ್ತಿ.