ಇಂಡಿಗೋ ವಿಮಾನದ ಆಹಾರ ಸಂಗ್ರಹದ ಜಾಗದಲ್ಲಿ ಜಿರಳೆ ಓಡಾಡುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಪತ್ರಕರ್ತರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಇಂಡಿಗೊ ವಿಮಾನದ ಆಹಾರ ಪ್ರದೇಶದ ಮೂಲಕ ಜಿರಳೆಗಳು ಓಡಾಡುತ್ತಿರುವ ಆಘಾತಕಾರಿ ದೃಶ್ಯವನ್ನು ಬಹಿರಂಗಪಡಿಸಿದೆ.
ತರುಣ್ ಶುಕ್ಲಾ ಹಂಚಿಕೊಂಡಿರುವ ಈ ಆತಂಕಕಾರಿ ತುಣುಕು ವಿಮಾನಯಾನ ಸಂಸ್ಥೆಯಲ್ಲಿ ನೈರ್ಮಲ್ಯ ಮಾನದಂಡಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.
ನಮ್ಮ ಸಿಬ್ಬಂದಿ ತಕ್ಷಣ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನಾವು ತಕ್ಷಣ ಕೊಠಡಿಯನ್ನು ಸ್ವಚ್ಛಗೊಳಿಸಿದ್ದೇವೆ . ಪ್ರಯಾಣಿಕರಿಗೆ ಉಂಟಾದ ಯಾವುದೇ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸುತ್ತೇವೆ, ಇನ್ನುಮುಂದೆ ಇಂತಹ ಘಟನೆಗಳು ನಡೆಯೋದಿಲ್ಲ. ನಾವು ಸ್ವಚ್ಛತೆ ಮತ್ತು ನೈರ್ಮಲ್ಯದ ಅತ್ಯುನ್ನತ ಮಾನದಂಡಗಳನ್ನು ಕಾಪಾಡಿಕೊಳ್ಳುತ್ತೇವೆ” ಎಂದು ಏರ್ ಲೈನ್ಸ್ ಹೇಳಿದೆ.