ಕೇವಲ ಎರಡು ಕೋಕ್ ಬಾಟಲಿಗಳನ್ನು ತೆಗೆದು ಬದಿಗಿಟ್ಟರೆ ಆ ಕಂಪನಿಗೆ ಶತಕೋಟಿಗಳ ಲೆಕ್ಕದಲ್ಲಿ ನಷ್ಟವಾಗುತ್ತದೆ ಎಂದು ಕ್ರಿಸ್ಟಿಯಾನೋ ರೊನಾಲ್ಡೋ ಅಂದುಕೊಂಡಿರಲಿಲ್ಲ ಎನಿಸುತ್ತದೆ.
ಫುಟ್ಬಾಲ್ ಪಂದ್ಯವೊಂದಕ್ಕೂ ಮುನ್ನ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಮುನ್ನ ತಮ್ಮೆದುರಿನ ಮೇಜಿನ ಮೇಲಿದ್ದ ಕೋಕ್ ಬಾಟಲಿಗಳನ್ನು ತೆಗೆದು ಬದಿಗಿಟ್ಟ ಪರಿಣಾಮ ಕಂಪನಿಯ ಮಾರುಕಟ್ಟೆ ಮೌಲ್ಯದಲ್ಲಿ $4 ಶತಕೋಟಿಯಷ್ಟು ಇಳಿಕೆ ಕಂಡುಬಂದಿದೆ.
ಅತ್ಯಂತ ಅಪಾಯಕಾರಿ ಚೇಳನ್ನು ಸಾಕಿದ್ದಾನೆ ಈ ಭೂಪ….!
ಕೋಕ್ ಬದಲಿಗೆ ನೀರಿನ ಬಾಟಲಿಯನ್ನು ಎತ್ತಿ ಹಿಡಿದ ರೊನಾಲ್ಡೋ, ಪೋರ್ಚುಗೀಸ್ ಭಾಷೆಯಲ್ಲಿ ’ಆಗ್ವಾ’ (ನೀರು) ಎನ್ನುವ ಮೂಲಕ ಕುಡಿಯುವ ನೀರಿಗೆ ಮಾನ್ಯತೆ ಕೊಟ್ಟಿದ್ದಾರೆ.
ಬಡವ – ಸಿರಿವಂತನ ಅಂತರ ಸಾರಿ ಹೇಳುತ್ತಿದೆ ಈ ಚಿತ್ರ
ಮಾರುಕಟ್ಟೆ ಮೌಲ್ಯದಲ್ಲಿ ಕುಸಿತದ ಬಳಿಕ ಕೋಕಾಕೋಲಾದ ಶೇರು ಮೌಲ್ಯದಲ್ಲಿ 1.6 ಪ್ರತಿಶತ ಇಳಿಕೆ ಕಂಡುಬಂದಿದ್ದು, $56.10 ಇಂದ $55.22ಕ್ಕೆ ಕುಸಿದಿದೆ. $242 ಶತಕೋಟಿಯಷ್ಟಿದ್ದ ಜನಪ್ರಿಯ ಪಾನೀಯದ ಮೌಲ್ಯವು $238 ಶತಕೋಟಿಗೆ ಇಳಿದಿದೆ.
ಯೂರೋ 2020ರ ಅಧಿಕೃತ ಪ್ರಾಯೋಜಕರಲ್ಲಿ ಒಬ್ಬರಾದ ಕೋಕಾಕೋಲಾ, ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಆಟಗಾರರಿಗೆ ಕೋಕಾಕೋಲಾ ಹಾಗೂ ಕೋಕಾಕೋಲಾ ಜ಼ೀರೋ ಶುಗರ್ ಬಾಟಲಿಗಳನ್ನು ಮೇಜಿನ ಮೇಲೆ ಇಟ್ಟಿರಲಾಗುತ್ತದೆ ಎಂದಿದ್ದು, ತಮ್ಮ ಆಯ್ಕೆಯ ಪೇಯಗಳನ್ನು ಕುಡಿಯಲು ಆಟಗಾರರಿಗೆ ಸ್ವತಂತ್ರ‍್ಯವಿದೆ ಎಂದಿದೆ.