ಆಗಸದಲ್ಲಿ ಹಾರುತ್ತಿದ್ದ ವಿಮಾನವೊಂದರ ಕಾಕ್‌ಪಿಟ್‌ನಲ್ಲಿ ನಾಗರ ಹಾವೊಂದು ತಲೆಯಾಡಿಸಿದ್ದು ಕಾಣುತ್ತಲೇ ಗಾಬರಿಗೊಂಡ ಪೈಲಟ್ ಕೂಡಲೇ ತುರ್ತು ಭೂಸ್ಪರ್ಶ ಮಾಡಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.
ಕಳೆದ ಐದು ವರ್ಷಗಳಿಂದ ವಿಮಾನ ಚಾಲನೆ ಮಾಡುತ್ತಿರುವ ಪೈಲಟ್ ರುಡಾಲ್ಫ್ ಎರಾಸ್ಮಸ್ ತಮ್ಮ ಆಸನದ ಹಿಂದೆಯೇ ನಾಗರ ಹಾವು ಸೇರಿಕೊಂಡರೂ ಸಹ ಗಾಬರಿಯ ನಡುವೆಯೇ ವಿಮಾನವನ್ನು ಸುರಕ್ಷಿತವಾಗಿ ವಿಮಾನದ ಲ್ಯಾಂಡಿಂಗ್ ಮಾಡಿದ್ದಾರೆ.
ಇಲ್ಲಿನ ವೋರ್ಸೆಸ್ಟರ್‌ನಿಂದ ನೆಲ್ಸ್‌ಪ್ರೂಟ್‌ಗೆ ನಾಲ್ವರು ಪ್ರಯಾಣಿಕರಿದ್ದ ಸಣ್ಣ ವಿಮಾನವನ್ನು ಹಾರಿಸುತ್ತಿದ್ದರು ಎರಾಸ್ಮಸ್. ಪಯಣದ ನಡುವೆ ನಾಗರ ಹಾವು ಹೀಗೆ ಕಾಣಿಸಿಕೊಳ್ಳುತ್ತಲೇ ಜೊಹಾನ್ಸ್‌ಬರ್ಗ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಗಿದೆ ಎಂದು ನಿಯಂತ್ರಣ ಸ್ಥಾವರಕ್ಕೆ ಸಂಪರ್ಕಿಸಿ ತಿಳಿಸಿದ್ದಾರೆ ಎರಾಸ್ಮಸ್.
ಪ್ರಕರಣವನ್ನು ಭಾರೀ ನಾಜೂಕಾಗಿ ನಿಭಾಯಿಸಿದ ಪೈಲಟ್‌ನ ಜಾಣ್ಮೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.