ಒಡಿಶಾದ ಸುಂದರ್‌ಗಢ ಜಿಲ್ಲೆಯ ರಾಜ್ ಗಂಗ್ ಪುರದಲ್ಲಿರುವ ಡಾಲ್ಮಿಯಾ ಸಿಮೆಂಟ್ ಕಾರ್ಖಾನೆಯಲ್ಲಿ ಕಲ್ಲಿದ್ದಲು ಹಾಪರ್ ಕುಸಿದು ಭಾರಿ ಅಪಘಾತ ಸಂಭವಿಸಿದೆ.
ಹಾಪರ್ ಕುಸಿದು ನಾಲ್ವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಹಲವರು ಅವಶೇಷಗಳಡಿ ಸಿಲುಕಿಕೊಂಡಿದ್ದು,ವ ಕಾರ್ಮಿಕರ ರಕ್ಷಣೆ ಪ್ರಗತಿಯಲ್ಲಿದ್ದು, ಸುಮಾರು ಒಂದು ಡಜನ್ ಕಾರ್ಮಿಕರು ಕೆಳಗೆ ಸಿಲುಕಿಕೊಂಡಿದ್ದಾರೆ. ಹೆಚ್ಚಿನ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ, ಆದಾಗ್ಯೂ ನಿಖರ ಸಂಖ್ಯೆಗಳನ್ನು ಇನ್ನೂ ದೃಢಪಡಿಸಲಾಗಿಲ್ಲ.
ಕೆಲವು ಮಹಿಳೆಯರು ಸೇರಿದಂತೆ ಸುಮಾರು 12 ಕಾರ್ಮಿಕರು ಕಲ್ಲಿದ್ದಲು ಹಾಪರ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕಟ್ಟಡ ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಕಲ್ಲಿದ್ದಲಿನ ದೊಡ್ಡ ರಾಶಿಯ ಅಡಿಯಲ್ಲಿ ಕಾರ್ಮಿಕರು ಹೂತು ಹೋಗಿದ್ದಾರೆ.
ರಾಜ್‌ಗಂಗ್‌ಪುರ ಸ್ಟೇಷನ್ ಹೌಸ್ ಆಫೀಸರ್(SHO) ಪ್ರಕಾರ, ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. JCB ಗಳು ಮತ್ತು ಇತರ ಭಾರೀ ಯಂತ್ರೋಪಕರಣಗಳನ್ನು ಹೊಂದಿದ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಸಿಲುಕಿರುವ ವ್ಯಕ್ತಿಗಳನ್ನು ರಕ್ಷಿಸಲು ಕೆಲಸ ಮಾಡುತ್ತಿವೆ. ಕಾರ್ಯಾಚರಣೆಗೆ ಆರು ಅಗ್ನಿಶಾಮಕ ವಾಹನಗಳು, ಮೂರು ಕ್ರೇನ್‌ಗಳು ಮತ್ತು ಹಲವಾರು ಆಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗಿದೆ. ತಹಶೀಲ್ದಾರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಸಹ ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆಗೆ ಬಂದಿದ್ದಾರೆ.
ಮೂಲಗಳ ಪ್ರಕಾರ, ನಾಲ್ಕು ಶವಗಳು ಪತ್ತೆಯಾಗಿವೆ ಆದರೆ ಅಧಿಕೃತ ದೃಢೀಕರಣಕ್ಕಾಗಿ ಕಾಯುತ್ತಿವೆ. ರಕ್ಷಣಾ ಕಾರ್ಯ ಮುಂದುವರಿದಿದ್ದರೂ ಅನೇಕ ಕಾರ್ಮಿಕರ ಸ್ಥಿತಿ ಇನ್ನೂ ತಿಳಿದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.