ಬಳ್ಳಾರಿ: ನಕಲಿ ಇ-ಮೇಲ್ ಮೂಲಕ ಕಲ್ಲಿದ್ದಲು ಕಂಪನಿಗೆ 2.11 ಕೋಟಿ ವಂಚನೆ ಮಾಡಿರುವ ಪ್ರಕರಣ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.
ನಕಲಿ ಇ-ಮೇಲ್ ಬಳಸಿ ಕಲ್ಲಿದ್ದಲು ಸರಬರಾಜು ಕಂಪನಿಗೆ ಬರೋಬ್ಬರಿ 2 ಕೋಟಿ 11 ಲಕ್ಷದ 50 ಸಾವಿರ ಕೋಟಿ ವಂಚಿಸಲಾಗಿದ್ದು, ಪ್ರಕರಣ ಸಂಬಂಧ ಮಧ್ಯಪ್ರದೇಶ ಮೂಲದ ಆರೋಪಿ ಅಜಯ್ ಕುಮಾರ್ ಜೈಸ್ವಾಲ್ ನನ್ನು ಬಂಧಿಸಲಾಗಿದೆ.
ಬಳ್ಳಾರಿಯ ಹಿಂದೂಸ್ತಾನ್ ಕ್ಯಾಲ್ಸಿನ್ಡ್ ಮೆಟಲ್ ಪ್ರೈ. ಲಿ ಕಂಪನಿ ಅಗರ್ವಾಲ್ ಕೋಲ್ ಕಾರ್ಪೊರೇಷನ್ ಕಂಪನಿಯಿಂದ ಕಲ್ಲಿದ್ದಲು ಖರೀದಿಸಿತ್ತು. ಹೀಗಾಗಿ ಹಿಂದೂಸ್ತಾನ್ ಕಂಪನಿಗೆ ಅಗರ್ವಾಲ್ ಕಂಪನಿ 2.11 ಕೋಟಿ ರೂ. ಕೊಡಬೇಕಿತ್ತು. ಆರೋಪಿ ಅಜಯ್ ಕುಮಾರ್ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ. ಅಗರ್ವಾಲ್ ಕಂಪನಿಯ ನಗಲಿ ಇ-ಮೇಲ್ ಸೃಷ್ಟಿಸಿ, ಕಂಪನಿಯ ಬ್ಯಾಂಕ್ ಅಕೌಂಟ್ ನಂಬರ್ ಚೇಜ್ ಆಗಿದೆ ಅಂತಾ ಹಿಂದೂಸ್ತಾನ್ ಕಂಪನಿಗೆ ಮೇಲ್ ಕಳುಹಿಸಿದ್ದ. ಅಕೌಂಟ್ ಗೆ ಹಣ ಹಾಕಿದ್ದರು. ತನ್ನ ಖಾತೆಗೆ ಬಂದ ಹಣವನ್ನು ಅನುಮಾನ ಬರಬಾರದು ಎಂದು ಇತರ 18 ಖಾತೆಗಳಿಗೆ ಹಣ ವರ್ಗಾಯಿಸಿ ಡ್ರಾ ಮಾಡಿದ್ದ.
ನಕಲಿ-ಮೇಲ್ ಮೂಲಕ ವಂಚನೆ ಎಂಬುದು ಕಂಪನಿಗೆ ಗೊತ್ತಾಗುತ್ತಿದ್ದಂತೆ ಸೆ.3ರಂದು ಬಳ್ಳಾರಿ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿ ಅಜಯ್ ಕುಮಾರ್ ನನ್ನು ಬಂಧಿಸಿ ಹಣವನ್ನು ವಶಕ್ಕೆ ಪಡೆದಿದ್ದಾರೆ.